ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ- ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರ.

ಶಿವಮೊಗ್ಗ,ಸೆಪ್ಟಂಬರ್,6,2023(www.justkannada.in): ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ  ಎಂದು ಮಾಜಿ ಗೃಹಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅರಗ ಜ್ಞಾನೇಂದ್ರ, ಇಂಡಿಯಾ ಹೆಸರಿಗೆ ತುಂಬಾ ಹಿನ್ನೆಲೆ ಇಲ್ಲ. ಬ್ರಿಟಿಷರಿಗೆ ಭಾರತ ಅಂತಾ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಅದಕ್ಕಾಗಿ ಬ್ರಿಟಿಷರು ಇಂಡಿಯಾ ಪದ ಬಳಕೆ ಮಾಡಿದ್ದರು. ಇಂಡಿಯಾ ಶಬ್ದಕ್ಕೆ ಅಂತಹ ಮಹತ್ವ ಇಲ್ಲ. ಬ್ರಿಟಿಷರು, ಮೊಘಲರ ಕಾಲದಲ್ಲಿ ಆದ ಪರಿವರ್ತನೆ ಬಗ್ಗೆ ಚರ್ಚೆ ಆಗುತ್ತಿದೆ. ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ ಎಂದರು.

ಯಾರೂ ಕೂಡ ಇಂಡಿಯಾ ಮಾತಾ ಕೀ ಜೈ ಎನ್ನುವುದಿಲ್ಲ. ನಾವೆಲ್ಲ ಭಾರತ ಮಾತಾ ಕೀ ಜೈ ಎನ್ನುತ್ತೇವೆ ಎಂದು ಅರಗ ಜ್ಞಾನೇಂದ್ರ ತಿಳಿಸಿದರು.

Key words: name – country – India –bharath-right decision – Araga Gyanendra.