ವೀಕೆಂಡ್ ಕರ್ಫ್ಯೂ ಯಶಸ್ವಿ: ಲಸಿಕೆ ಖರೀದಿಗೆ ಹಣ ಬಿಡುಗಡೆ – ಗೃಹ ಸಚಿವ ಬಸವರಾಜ ಬೊಮ್ಮಾಯಿ…

ಬೆಂಗಳೂರು,ಏಪ್ರಿಲ್,24,2021(www.justkannada.in): ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದುನ್ನ ತಡೆಗಟ್ಟಲು ರಾಜ್ಯಾದ್ಯಂತ ಜಾರಿಗೊಳಿಸಲಾಗಿರುವ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.jk

ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಜನರಲ್ಲಿ ಅರಿವು ಮೂಡಿದೆ. ಹೀಗಾಗಿ ವೀಕೆಂಡ್ ಕರ್ಫ್ಯೂಗೆ ಸಹಕಾರ ನೀಡುತ್ತಿದ್ದಾರೆ. ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ. ಕೊರೋನಾ ಕಳೆದ ಬಾರಿಗಿಂತ ಈ ಬಾರಿ ತೀವ್ರವಾಗಿದೆ. ಕೊರೋನಾ ಚೈನ್ ಲಿಂಕ್ ಮುರಿಯಲು ಇದು ಅಗತ್ಯ ಎಂದರು.Weekend Curfew –Successful- Home Minister -Basavaraja Bommai.

ಇನ್ನು ಕೋವಿಡ್ ಲಸಿಕೆ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸೋಮವಾರ ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಸರ್ಕಾರ 1 ಕೋಟಿ ಲಸಿಕೆ ಖರೀದಿಗೆ ಹಣ ಬಿಡುಗಡೆ ಮಾಡಿದೆ. ಎಷ್ಟು ಲಸಿಕೆ ಬೇಕು ಅದರ ಖರೀದಿಗೆ ಅಷ್ಟು ಹಣ ಒದಗಿಸಲು ಸರ್ಕಾರ ಸಿದ್ಧ. ಲಸಿಕೆ ಹಂಚಿಕೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

Key words: Weekend Curfew –Successful- Home Minister -Basavaraja Bommai.