Saturday, August 15, 2026

BDA Apartments

Home Front Page ನಾವೆಲ್ಲರೂ ಶ್ರೀರಾಮನ ಭಕ್ತರೇ: ಆದರೆ ಬಿಜೆಪಿ ನಡೆಗೆ ವಿರೋಧ- ಸಿಎಂ ಸಿದ್ದರಾಮಯ್ಯ.

ನಾವೆಲ್ಲರೂ ಶ್ರೀರಾಮನ ಭಕ್ತರೇ: ಆದರೆ ಬಿಜೆಪಿ ನಡೆಗೆ ವಿರೋಧ- ಸಿಎಂ ಸಿದ್ದರಾಮಯ್ಯ.

ಬೆಂಗಳೂರು,ಜನವರಿ,11,2024(www.justkannada.in): ನಾವು ಶ್ರೀರಾಮಚಂದ್ರನ ವಿರುದ್ದ ಅಲ್ಲ ನಾವೆಲ್ಲರೂ ಶ್ರೀರಾಮನ ಭಕ್ತರೇ. ಆದರೆ ಬಿಜೆಪಿ ಮಾಡುತ್ತಿರುವ ರಾಜಕೀಯಕ್ಕೆ ನಮ್ಮ ವಿರೋಧವಿದೆ ಎಂದು ಸಿಎಂ ಸಿದ್ದರಾಮಯ್ಯ ನುಡಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ.  ನಾವು ಕೂಡ ರಾಮನನ್ನ ಪೂಜಿಸುತ್ತೇವೆ. ಗೌರವಿಸುತ್ತೇವೆ.  ನಮ್ಮೂರಲ್ಲಿ ರಾಮ ಮಂದಿರ ಕಟ್ಟಿದ್ದೇವೆ.  ಭಜನೆ ಮಾಡುತ್ತೇವೆ. ರಾಮಮಂದಿರಕ್ಕೆ ನಮ್ಮ ವಿರೋಧವಿಲ್ಲ ಎಂದರು.

ರಾಮಮಂದಿರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವ ನಡೆಯನ್ನ ನಾವು ವಿರೋಧಿಸುತ್ತೇವೆ ಅಷ್ಟೆ. ಕೇಂದ್ರ ಸಚಿವರು ರಾಜಕೀಯ ಮಾತನಾಡ್ತಿದ್ದಾರೆ.  ರಾಜಕೀಯವಾಗಿ ಮಾತನಾಡುವವರಿಗೆ ಔಷಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Key words: We are -all – Sri Ram- devotees – opposition – BJP-move- CM Siddaramaiah.