Wednesday, September 30, 2026

BDA Apartments

ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು: ನೀರಿನ ಮಟ್ಟ ಕುಸಿತ BDA JK...
Home Front Page ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು: ನೀರಿನ ಮಟ್ಟ ಕುಸಿತ

ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು: ನೀರಿನ ಮಟ್ಟ ಕುಸಿತ

ಮೈಸೂರು,ಆಗಸ್ಟ್,15,2026 (www.justkannada.in): ತಮಿಳುನಾಡಿಗೆ ಪ್ರತಿನಿತ್ಯ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್  ನೀರು ಹರಿಸುವಂತೆ  ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನ ಅಧಿಕಾರಿಗಳು ಪಾಲಿಸಿದ್ದು ಬರೋಬ್ಬರಿ 12,000 ಕ್ಯೂಸೆಕ್ಸ್ ನೀರನ್ನು ಹರಿಬಿಟ್ಟಿದ್ದಾರೆ.

ಅಧಿಕಾರಿಗಳು ತಮಿಳುನಾಡು ಕೇಳಿದ್ದಷ್ಟು ನೀರು ಹರಿಸುತ್ತಿದ್ದು  ಇದರಿಂದಾಗಿ ಕಬಿನಿ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ. ತಮಿಳುನಾಡಿಗೆ ನೆನ್ನೆಯವರೆಗೆ 10,000 ಕ್ಯೂಸೆಕ್ ನೀರು ಹರಿಬಿಡಲಾಗಿತ್ತು. ಈಗ ಏಕಾಏಕಿ 12,000 ಕ್ಯೂಸೆಕ್ ಗೆ ಏರಿಕೆ ಮಾಡಿದ್ದು, ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕೂಡ ಇಳಿಮುಖವಾಗಿದೆ.ಕಬಿನಿಯಿಂದ ತಮಿಳುನಾಡಿಗೆ ನೀರು ಹರಿಸಿದ ಅಧಿಕಾರಿಗಳು kabini

ಜಲಾಶಯಕ್ಕೆ 8701 ಕ್ಯೂಸೆಕ್ಸ್ ಮಾತ್ರ ಒಳಹರಿವು ಇದೆ. ತಮಿಳುನಾಡಿಗೆ ನೀರು ಹರಿಬಿಟ್ಟ ಪರಿಣಾಮ ಜಲಾಶಯದ ನೀರಿನ ಮಟ್ಟ ಕೂಡ ಕುಸಿತ ಕಂಡಿದೆ. ನಿನ್ನೆ 82.30 ಅಡಿ ಇದ್ದ ಕಬಿನಿ ಜಲಾಶಯದ ನೀರು ಇಂದು 81.63 ಅಡಿಗೆ ಕುಸಿತವಾಗಿದೆ. ಜಲಾಶಯದ ಒಟ್ಟು ಸಾಮರ್ಥ್ಯ 19.52 ಟಿಎಂಸಿ ಇದ್ದು ಇಂದಿನ ಸಾಮರ್ಥ್ಯ 18.01 ಟಿಎಂಸಿಗೆ ಕುಸಿತವಾಗಿದೆ.ನೀರಿನ ಮಟ್ಟ ಕುಸಿತ jk02_new jk02 new

Key words: release, water, from, Kabini, to,Tamil Nadu