Sunday, August 9, 2026

BDA Apartments

Home Front Page ಬಾಂಗ್ಲಾ ಕ್ರಿಕೆಟ್‌ ಅಕಾಡೆಮಿ ಕೋಚ್‌ ಹುದ್ದೆಗೆ ಜಾಫರ್‌

ಬಾಂಗ್ಲಾ ಕ್ರಿಕೆಟ್‌ ಅಕಾಡೆಮಿ ಕೋಚ್‌ ಹುದ್ದೆಗೆ ಜಾಫರ್‌

ಕೋಲ್ಕತಾ, ಮೇ 17, 2019 (www.justkannada.in): ಭಾರತ ಕ್ರಿಕೆಟ್‌ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಾಸಿಂ ಜಾಫರ್‌ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ), ಮೀರ್‌ಪುರ್‌ನಲ್ಲಿರುವ ತನ್ನ ಅಕಾಡೆಮಿ ಬ್ಯಾಟಿಂಗ್‌ ಕೋಚ್‌ ಆಗಿ ನೇಮಕ ಮಾಡಿಕೊಂಡಿದೆ.

ಒಂದು ವರ್ಷ ಅವಧಿಗೆ ಜಾಫರ್‌, ಬಿಸಿಬಿ ಜತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ‘ಆರಂಭದಲ್ಲಿ ಅವರು ಅಂಡರ್‌-16ರಿಂದ ಅಂಡರ್‌-19 ವರೆಗಿನ ತಂಡಗಳೊಂದಿಗೆ ಕೆಲಸ ಮಾಡಲಿದ್ದಾರೆ.

ಬಳಿಕ ಅವರನ್ನು ಬಿಸಿಬಿಯ ಉನ್ನತ ಪ್ರದರ್ಶನ ಘಟಕದ ಬ್ಯಾಟಿಂಗ್‌ ಸಲಹೆಗಾರರಾಗಿ ನೇಮಕ ಮಾಡಿಕೊಳ್ಳುವ ಬಗ್ಗೆ ಯೋಚಿಸಲಿದ್ದೇವೆ’ ಎಂದು ಬಿಸಿಬಿ ಅಧಿಕಾರಿ ಕೈಸಾರ್‌ ಅಹ್ಮದ್‌ ಹೇಳಿದ್ದಾರೆ. 41 ವರ್ಷದ ಜಾಫರ್‌, ವರ್ಷದಲ್ಲಿ 6 ತಿಂಗಳು ಬಾಂಗ್ಲಾದೇಶದಲ್ಲಿ ಕೋಚಿಂಗ್‌ ನಡೆಸಲಿದ್ದಾರೆ.