Saturday, August 8, 2026

BDA Apartments

Home Front Page ವೀರಶೈವ ಸಮುದಾಯದವರು ಕಾಂಗ್ರೆಸ್ ಗೆ ವೋಟ್ ಹಾಕಲ್ಲ-ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

ವೀರಶೈವ ಸಮುದಾಯದವರು ಕಾಂಗ್ರೆಸ್ ಗೆ ವೋಟ್ ಹಾಕಲ್ಲ-ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿಕೆ…

ಕಲ್ಬುರ್ಗಿ,ಮೇ,17,2019(www.justkannada.in):  ವೀರಶೈವ ಸಮುದಾಯಕ್ಕೆ ಕಾಂಗ್ರೆಸ್ ಅಪಮಾನ ಮಾಡುತ್ತಲೇ ಬಂದಿದೆ. ಹೀಗಾಗಿ ಕಾಂಗ್ರೆಸ್ ಗೆ ವೀರಶೈವ ಸಮುದಾಯದವರು ವೋಟ್ ಹಾಕಲ್ಲ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ಮಾಧ್ಯಮದವರ ಜತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ವಿರೇಂದ್ರ ಪಾಟೀಲ್ ಅವರನ್ನ ಕಾಂಗ್ರೆಸ್  ಸಿಎಂ ಸ್ಥಾನದಿಂದ ಕೆಳಗಿಳಿಸಿತ್ತು. ಈ ಮೂಲಕ ವಿರೇಂದ್ರ ಪಾಟೀಲ್ ಅವರಿಗೆ ವಿಶ್ವಾಸ ದ್ರೋಹವೆಸಗಿತ್ತು ಎಂದು ಕಿಡಿಕಾರಿದರು.

ಹಾಗೆಯೇ ಸಮ್ಮಿಶ್ರ ಸರ್ಕಾರ ಬಹಳ ದಿನ ಉಳಿಯಲ್ಲ.  ಟ್ವಿಟ್ ಮೂಲಕ ಸಿದ್ದರಾಮಯ್ಯ ಮತ್ತು ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಚ್ಚಾಡುತ್ತಿದ್ದಾರೆ. ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ಚೊಂಚೋಳಿ ಮತ್ತು ಕುಂದಗೋಳ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

The Veerashaiva community has not vote for the Congress- former CM BS Yeddyurappa’s statement

#kalburgi #politicalnews #Veerashaivacommunity #bs yeddyurappa