ಚುನಾವಣಾ ಪ್ರಚಾರಕ್ಕೆ ಸಜ್ಜಾಗುತ್ತಿದ್ದ ನಟಿ ಶೃತಿಗೆ ಅನಾರೋಗ್ಯ

0
773

ಬೆಂಗಳೂರು, ಮೇ 17, 2019 (www.justkannada.in): ಹಿರಿಯ ನಟಿ ಹಾಗೂ ಬಿಜೆಪಿ ನಾಯಕಿ ಶ್ರುತಿ ಅನಾರೋಗ್ಯಕ್ಕೀಡಾಗಿದ್ದಾರೆ.

ಅವರಿಗೆ ಚರ್ಮ ಅಲರ್ಜಿ ಸಮಸ್ಯೆ ಉಂಟಾಗಿದ್ದು, ಗುರುವಾರ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕುಂದಗೋಳ ಉಪ ಚುನಾವಣೆಯ ಪ್ರಚಾರಕ್ಕೆ ಹುಬ್ಬಳ್ಳಿಗೆ ಹೋಗಲು ಬೆಳಗ್ಗೆ 5 ಗಂಟೆಗೆ ಎದ್ದಿದ್ದ ಅವರಿಗೆ ತುಟಿ ಕೊಂಚ ಊದಿಕೊಂಡ ಅನುಭವ ಆಗಿದೆ. ಬಳಿಕ ನಾಲಗೆ ದಪ್ಪ ಆಗಲು ಶುರುವಾಗಿದ್ದು, ಮಾತನಾಡಲೂ ಆಗದಂತೆ ನಾಲಗೆ ಮರಗಟ್ಟಿದೆ.

ಬಳಿಕ ಸ್ವಲ್ಪ ಹೊತ್ತಿಗೆ ಉಸಿರಾಡುವುದು ಕಷ್ಟವಾದಾಗ ತಕ್ಷಣ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.