ಅಭಿವೃದ್ದಿಗೆ ಮತ ಕೇಳ್ತಿದ್ದೇನೆ: ಪ್ರೀತಿ ವಿಶ್ವಾಸಕ್ಕಾಗಿ ನಮಗೆ ಮತನೀಡಿ- ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಮನವಿ

ಮೈಸೂರು,ಡಿ,2,2019(www.justkannada.in): ನಾನು ಹಣಕ್ಕಾಗಿ ಅಧಿಕಾರಕ್ಕಾಗಿ  ರಾಜೀನಾಮೆ ಕೊಡಲಿಲ್ಲ. ನಾನು ಅಭಿವೃದ್ಧಿಗಾಗಿ ಮತ ಕೇಳುತ್ತಿದ್ದೇನೆ. ಪ್ರೀತಿ ವಿಶ್ವಾಸಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಮನವಿ ಮಾಡಿದರು.

ಇಂದು ಮಾಧ್ಯಮದ ಜತೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್.   ನಾನು ಸ್ವಾಭಿಮಾನಕ್ಕೆ ಪೆಟ್ಟಾಗಿ ರಾಜೀನಾಮೆ ಕೊಟ್ಟಿದ್ದೇನೆ .ನನ್ನ ಮನಸ್ಸಿಗೆ ಘಾಸಿಯಾಗಿ ನಾನು ರಾಜೀನಾಮೆ ಕೊಡಬೇಕಾಗಿ ಬಂತು. ಹುಣಸೂರು ಅಭಿವೃದ್ದಿಗೆ ಶ್ರಮಿಸುತ್ತೇನೆ. ಪ್ರೀತಿ ವಿಶ್ವಾಸಕ್ಕಾಗಿ ಬಿಜೆಪಿಗೆ ಮತನೀಡಿ. ಹುಣಸೂರು ಜಿಲ್ಲೆಯ ಮಾಡಿಯೇ ಮಾಡುತ್ತೇವೆ ಎಂದು ನುಡಿದರು.

ಹುಣಸೂರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹನುಮ ಜಯಂತಿ ಆಚರಣೆ ವೇಳೆ ಸುಳ್ಳು ಕೇಸ್ ಹಾಕಲಾಗಿದೆ. 80 ವರ್ಷ ವಯಸ್ಸಾದವರಿಗೂ ರೌಡಿ ಶೀಟರ್ ಓಪನ್ ಮಾಡಲಾಗಿದೆ. ಹುಣಸೂರಿನಲ್ಲಿ ಹಬ್ಬ ಹರಿದಿನ ಮಾಡಲು ಪೊಲೀಸ್ ಅನುಮತಿ ಬೇಕಿದೆ ಎಂದು ಹೇಳಿದರು.

ಹಾಗೆಯೇ ಕಾಂಗ್ರೆಸ್ –ಜೆಡಿಎಸ್ ಮತ್ತೆ ಮೈತ್ರಿ ಸಾಧ್ಯತೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಮೈತ್ರಿ ಬಗ್ಗೆ ನಿನ್ನೆಯಿಂದ ಮಾತನಾಡುತ್ತಿದ್ದೀರಿ. ನಿಮಗೆ ಮಾನ ಮರ್ಯಾದೆ ಇದೆಯಾ. ಮತ್ತೆ ಮೈತ್ರುಯಾದ್ರೆ ಆಗ ಯಾಕೆ ಮೈತ್ರಿಯಿಂದ ಹೊರ ಬಂದಿದ್ದು ಎಂದು ಜೆಡಿಎಸ್ ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾರಿದರು.

Key words:  vot-development-hunsur-BJP candidate-  H. Vishwanath