ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ: ನಿಷೇಧಾಜ್ಞೆ ಜಾರಿ, ಮದ್ಯ ಮಾರಾಟ ಬಂದ್- ಪೊಲೀಸ್ ಆಯುಕ್ತ ಭಾಸ್ಕರ್ ರಾವ್…

ಬೆಂಗಳೂರು, ಡಿ,2,2019(www.justkannada.in):   ಬೆಂಗಳೂರು ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನಲೆ ನಾಳೆಯಿಂದ ನಿಷೇಧಾಜ್ಞೆ ಜಾರಿ ಮತ್ತು ಮದ್ಯ ಮಾರಾಟ ಬಂದ್ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಉಪಚುನಾವಣೆಗೆ ಸಿದ್ಧತೆ ಬಗ್ಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್,  ಕೆ. ಆರ್. ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ಎಂದು ಮತದಾನ ನಡೆಯಲಿದ್ದು  ಈ ಹಿನ್ನೆಲೆ ಡಿಸೆಂಬರ್ 3 ರ ಸಂಜೆ 6 ರಿಂದ ಡಿಸೆಂಬರ್ 6ರ ಸಂಜೆ 6ಗಂಟೆವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ರಾಜಕೀಯ ಪಕ್ಷಗಳು ಮತ್ತು ಧಾರ್ಮಿಕ ಪಂಗಡಗಳು ಮೆರವಣಿಗೆ ಮಾಡುವ ಹಾಗಿಲ್ಲ. ಜತೆಗೆ ಮದ್ಯ ಮಾರಾಟವನ್ನ ನಿಷೇಧಿಸಳಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಬಿಗಿಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಭದ್ರತೆಗಾಗಿ  7 ಮಂದಿ ಡಿಸಿಪಿ 14 ಮಂದಿ ಎಸಿಪಿ  30 ಮಂದಿ ಇನ್ಸ್ ಪೆಕ್ಟರ್ಸ್, 68 ಪಿಎಸ್ ಐಗಳು, 160 ಮಂದಿ ಎಎಸ್‌ಐ  ಎಚ್‌ಸಿ/ಪಿಸಿ 1666. ಹೋಂ ಗಾರ್ಡ್ 951 ಮಂದಿ ಸೇರಿ 2896 ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ ಎಂದು ಭಾಸ್ಕರ್ ರಾವ್ ಮಾಹಿತಿ ನೀಡಿದರು.

Key words: by election- Bangalore- four constituencies -Prohibition – Police Commissioner -Bhaskar Rao.