ನನಗೆ ಸಚಿವ ಸ್ಥಾನ ಕೊಡಿ ಜಿಲ್ಲೆಯಲ್ಲಿ ಜೆಡಿಎಸ್ ಬೆಳೆಸುತ್ತೇನೆ ಎಂದು ಹೇಳಿದ್ದ- ಬಿಜೆಪಿ ಅಭ್ಯರ್ಥಿ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿ…

ಚಿಕ್ಕಬಳ್ಳಾಪುರ,ನ,2,2019(www.justkannada.in):  ನನಗೆ ಸಚಿವ ಸ್ಥಾನ ಕೊಡಿ ನಾನು ಜಿಲ್ಲೆಯಲ್ಲಿ ಜೆಡಿಎಸ್ ಬೆಳೆಸುತ್ತೇನೆ ಎಂದು ಹೇಳಿದ್ದ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ ನಡೆಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಇಲ್ಲಿ ಜೆಡಿಎಸ್ ಕಾರ್ಯಕರ್ತರು ಜೀವಕ್ಕೆ ಜೀವಕೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಕ್ಷೇತ್ರದ ದುಷ್ಟ ರಾಜಕಾರಣಿಯನ್ನ  ತೆಗೆಯಲು ಜನ ನಿರ್ಧರಿಸಿದ್ದಾರೆ.  ಸುಧಾಕರ್ ನನಗೆ ಸಚಿವ ಸ್ಥಾನ ಕೊಡಿ ಜೆಡಿಎಸ್ ಬೆಳೆಸುತ್ತೇನೆ ಎಂದು ಹೇಳಿದ್ದ. ಒಂದು ಕಡೆ ನಾನು ಹೆಚ್.ಡಿಕೆ ಸಂಬಂಧಿ ಎಂದು ಹೇಳುತ್ತಾನೆ. ಆದ್ರೆ ನಾನು ಸಿಎಂ ಆಗಿರುವುದು ಸುಧಾಕರ್ ಗೆ ಇಷ್ಟವಿರಲಿಲ್ಲ ಎಂದು ಕಿಡಿಕಾರಿದರು. ಜಾತಿ ಹೆಸರಿನಲ್ಲಿ ನಾನು ರಾಜಕಾರಣ ಮಾಡಲ್ಲ ಎಂದರು.

ಇದೇ ವೇಳೆ ಹನಿಟ್ರ್ಯಾಪ್ ಬಗ್ಗೆ ಪ್ರಸ್ತಾಪಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಬಿಎಸ್ ವೈ  ಗಲೀಜು ವ್ಯಕ್ತಿಗಳ ಪರ ನಿಂತಿದ್ದಾರೆ. ಇಂತಹ ಕೆಟ್ಟ ಹುಳುಗಳನ್ನ ಸೇರಿಸಿಕೊಂಡು ಅಭಿವೃದ್ಧಿ ಮಾಡುತ್ತೇನೆ ಅಂತಾರೆ ಎಂದು ಲೇವಡಿ ಮಾಡಿದರು.

Key words: ministerial -position – JDS – developed – district- Former CM -HD Kumaraswamy – against -BJP candidate