ಹುತಾತ್ಮ ಯೋಧರ ಮಕ್ಕಳಿಗೆ ವೀರೇಂದ್ರ ಸೆಹ್ವಾಗ್ ತರಬೇತಿ

ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮ ಒಡೆತನದ ಶಾಲೆಯಲ್ಲಿ ಇಬ್ಬರು ಹುತಾತ್ಮ ಯೋಧರ ಮಕ್ಕಳಿಗೆ ಶಿಕ್ಷಣದ ಜತೆಗೆ ಕ್ರಿಕೆಟ್ ತರಬೇತಿಯನ್ನೂ ನೀಡುತ್ತಿದ್ದಾರೆ.

ಈ ಮಕ್ಕಳ ವಿಡಿಯೋವನ್ನು ಸ್ವತಃ ಸೆಹ್ವಾಗ್ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧ ರಾಮ್ ವಕೀಲ್ ಮತ್ತು ವಿಜಯ್ ಸೊರೆಂಗ್ ಪುತ್ರರಿಗೆ ಸೆಹ್ವಾಗ್ ತಮ್ಮ ಶಾಲೆಯಲ್ಲಿ ತರಬೇತಿ ನೀಡುತ್ತಿದ್ದಾರೆ.

ಇವರು ಹೀರೋಗಳ ಮಕ್ಕಳು ಎಂದು ಕರೆದಿರುವ ಸೆಹ್ವಾಗ್, ಇವರಿಗೆ ನಮ್ಮ ಶಾಲೆಯಲ್ಲಿ ಅವಕಾಶ ನೀಡುವುದೇ ನಮಗೆ ಹೆಮ್ಮೆ ಎಂದು ಬರೆದುಕೊಂಡಿದ್ದಾರೆ.