ಕಳಪೆ ಆಟವಾಡಿದ ಪ್ರಮುಖ ಆಟಗಾರರು ಆರ್’ಸಿಬಿ ತಂಡದಿಂದ ಔಟ್

ಬೆಂಗಳೂರು, ಅಕ್ಟೋಬರ್ 17, 2019 (www.justkannada.in): ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಗೆ ಎಲ್ಲಾ ಫ್ರಾಂಚೈಸಿಗಳು ಭರ್ಜರಿ ತಯಾರಿ ನಡೆಸಿವೆ.

ಡಿಸೆಂಬರ್ 19 ರಂದು ಇದೇ ಮೊದಲ ಬಾರಿಗೆ ಕೋಲ್ಕತ್ತಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಕೆಲ ಫ್ರಾಂಚೈಸಿಗಳು ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದೆ.

ರಾಯಲ್ ಚಾಲೆಂಜರ್ಸ್​​ ಬೆಂಗಳೂರು ಫ್ರಾಂಚೈಸಿ ಹಿಂದಿನ ಆವೃತ್ತಿಯಲ್ಲಿ ಕಳಪೆ ಆಟವಾಡಿದ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಡಲು ನಿರ್ಧಾರಮಾಡಿದೆ. ಸದ್ಯ ಆರ್​ಸಿಬಿ ಈ ಮೂವರು ಪ್ಲೇಯರ್​ಗಳನ್ನು ರಿಲೀಸ್ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.