ಕ್ರಿಸ್ ಗೇಲ್ ಜೊತೆ ಡ್ಯಾನ್ಸ್ ಮಾಡಿದ ಕೊಯ್ಲಿ !

ಗಯಾನಾ, ಆಗಸ್ಟ್ 09, 2019 (www.justkannada.in): ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಖತ್ತಾಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳನ್ನು ರಂಜಿಸಿದರು !

ಮಳೆ ಮುಗಿಯುತ್ತಿದ್ದಂತೆ ಮೈದಾನಕ್ಕೆ ಬಂದ ವಿರಾಟ್ ಕೊಹ್ಲಿ, ಸಿಬ್ಬಂದಿ ಜೊತೆ ಡಾನ್ಸ್ ಮಾಡಿದ್ರು. ಅಷ್ಟೇ ಅಲ್ಲ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಗೇಲ್ ಜೊತೆಗೂ ಭಾಂಗ್ರಾ ಡಾನ್ಸ್ ಮಾಡಿ ಗಮನ ಸೆಳೆದರು.

ವಿರಾಟ್ ಕೊಹ್ಲಿ ಮಾತ್ರವಲ್ಲ ಕೇದಾರ್ ಜಾಧವ್ ಕೂಡ ನೃತ್ಯ ಮಾಡಿದ್ರು. ವಿರಾಟ್ ಕೊಹ್ಲಿ ನೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.