ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಅಶೀಮ್ ಅಮ್ಲಾ

ದಕ್ಷಿಣ ಆಫ್ರಿಕಾ, ಆಗಸ್ಟ್ 09, 2019 (www.justkannada.in): ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಅಶೀಮ್ ಅಮ್ಲಾ ತನ್ನ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ.

ವಿಭಿನ್ನ ಬ್ಯಾಟಿಂಗ್ ಸ್ಟೈಲ್ ಮೂಲಕ ಹೆಸರುಗಳಿಸಿದ್ದ 36 ವರ್ಷದ ಅಮ್ಲಾ ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದು ದೇಶಿಯ ಟೂರ್ನಿಯಲ್ಲಿ ಆಡುವುದಾಗಿ ಹೇಳಿದ್ದಾರೆ.

ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದ ಅಮ್ಲಾ ಇತ್ತಿಚೆಗೆ ಯಾವ ಪಂದ್ಯದಲ್ಲಿಯೂ ಅತ್ಯುತ್ತಮ ಆಟವನ್ನು ಪ್ರದರ್ಶಿಸಿರಲಿಲ್ಲ, ಇನ್ನು ವಿಶ್ವಕಪ್‍ನಲ್ಲೂ ಕಳಪೆ ಪ್ರದರ್ಶನ ನೀಡಿದ್ದ ಅಮ್ಲ, 7 ಇನ್ನಿಂಗ್ಸ್ ನಿಂದ ಕೇವಲ 203ರನ್ ಮಾತ್ರ ಸಿಡಿಸಿದ್ದರು.