ಮಳಯಿಂದ ರದ್ದಾದ ವೆಸ್ಟ್ ಇಂಡೀಸ್-ಭಾರತ ಏಕದಿನ ಪಂದ್ಯ

ಗಯಾನಾ, ಆಗಸ್ಟ್ 09, 2019 (www.justkannada.in): ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವೆ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು.

ಇದಕ್ಕೂ ಮುನ್ನ ಟಾಸ್‌ ಗೆದ್ದಿದ್ದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಫೀಲ್ಡಿಂಗ್‌ ಆಯ್ದುಕೊಂಡಿದ್ದರು. ಈ ವೇಳೆ ಮೈದಾನ ತೇವವಾಗಿದ್ದರಿಂದ ತೀರ್ಪುಗಾರರು ಪಂದ್ಯ ತಡವಾಗಿ ಆರಂಭಿಸಲು ನಿರ್ಧರಿಸಿದ್ದರು.

ತಡವಾಗಿ ಆರಂಭವಾದ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಪರ ಕ್ರಿಸ್‌ ಗೇಲ್‌ ಹಾಗೂ ಎವಿನ್‌ ಲೆವಿಸ್‌ ಕಣಕ್ಕೆ ಇಳಿದರು. ಈ ಜೊಡಿ ಮುರಿಯದ ಮೊದಲನೇ ವಿಕೆಟ್‌ಗೆ 42 ರನ್‌ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟಿತು.

ಭಾರಿ ನಿಧಾನಗತಿಯಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದ ಕ್ರಿಸ್‌ ಗೇಲ್‌ 31 ಎಸೆತಗಳಲ್ಲಿ ಕೇವಲ ನಾಲ್ಕು ರನ್ ಗಳಿಸಿದ್ದಾಗ ಕುಲ್ದೀಪ್‌ ಯಾದವ್‌ಗೆ ಕ್ಲೀನ್‌ ಬೌಲ್ಡ್ ಆದರು.