ಟೊಕಿಯೊ ಒಲಂಪಿಕ್ಸ್’ಗೆ ಅರ್ಹತೆ ಪಡೆದ ವಿನೇಶಾ ಪೋಗಟ್

ಕಜಕಿಸ್ತಾನ, ಸೆಪ್ಟೆಂಬರ್ 19, 2019 (www.justkannada.in): ವಿನೇಶಾ ಪೋಗಟ್ ಟೊಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಕುಸ್ತಿಪಟು ಎಂಬ ಹೆಗ್ಗಳಿಕೆಗೂ ವಿನೇಶಾ ಪೋಗಟ್ ಪಾತ್ರರಾಗಿದ್ದಾರೆ. ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 53 ಕೆಜಿ ವಿಭಾಗದ ರಿಪೇಚ್‌ನಲ್ಲಿ ಎರಡು ಸುತ್ತುಗಳನ್ನು ಗೆದ್ದು ಈ ಅರ್ಹತೆ ಗಳಿಸಿದ್ದಾರೆ.

ವಿನೇಶಾ ಅರ್ಹತಾ ವಿಭಾಗದ ಎರಡನೇ ಸುತ್ತಿನಲ್ಲಿ ಜಪಾನ್‌ನ ಮಕೈಡಾ ವಿರುದ್ಧ ಸೋತಿದ್ದರು. ಸೆಮಿಫೈನಲ್‌ನಲ್ಲಿ ಗೆದ್ದ ಮಕೈಡಾ ಫೈನಲ್ ತಲುಪಿದ್ದರಿಂದ ವಿನೇಶಾ ಅವರಿಗೆ ರಿಪೇಚ್‌ ವಿಭಾಗ ಪ್ರವೇಶಿಸಿದರು.