Sunday, August 23, 2026

BDA Apartments

Home Front Page ಮಾರಿಷಸ್’ನಲ್ಲಿ ಆಸ್ತಿ: ವಿಜಯೇಂದ್ರ ದಿಲ್ಲಿ ಪ್ರವಾಸ ಇಡಿ ವಿಚಾರಣೆಗೆ: ಹೊಸ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್...

ಮಾರಿಷಸ್’ನಲ್ಲಿ ಆಸ್ತಿ: ವಿಜಯೇಂದ್ರ ದಿಲ್ಲಿ ಪ್ರವಾಸ ಇಡಿ ವಿಚಾರಣೆಗೆ: ಹೊಸ ಬಾಂಬ್ ಸಿಡಿಸಿದ ಬಸನಗೌಡ ಪಾಟೀಲ್ ಯತ್ನಾಳ್

ಬೆಂಗಳೂರು, ಜೂನ್ 06, 2021 (www.justkannada.in): ಜಾರಿ ನಿರ್ದೇಶನಾಲಯ (ಇಡಿ) ವಿಜಯೇಂದ್ರ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಹೀಗಾಗಿ ವಿಜಯೇಂದ್ರ, ದೆಹಲಿಗೆ ಹೋಗಿದ್ದರು ಎಂದು ತಿಳಿಸಿದ್ದಾರೆ  ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಹೌದು. ವಿಜಯೇಂದ್ರ ದಿಲ್ಲಿ ಪ್ರವಾಸ ಪಕ್ಷದ ಹೈಕಮಾಂಡ್ ಅನ್ನು ಭೇಟಿ ಮಾಡಲು ಅಲ್ಲಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಾಜ್ಯದಲ್ಲಿ ಹಲವು ಉಪಾಧ್ಯಕ್ಷರು ಇದ್ದಾರೆ. ಅವರನ್ನೆಲ್ಲಾ ಬಿಟ್ಟು ವಿಜಯೇಂದ್ರ ಅವರನ್ನು ಮಾತ್ರ ವರಿಷ್ಠರು ಯಾಕೆ ಕರೆಯುತ್ತಾರೆ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಮಾರಿಷಸ್ ನಲ್ಲಿ ಅಕ್ರಮವಾಗಿರುವ ಆರ್ಥಿಕ ಮೂಲ ಎಲ್ಲಿಂದ ಬಂತು ಮತ್ತು ಕಿಯಾ ಕಂಪೆನಿಗೆ ವರ್ಗಾವಣೆ ಆಗಿದ್ದು ಹೇಗೆ ಎನ್ನುವ ವಿಚಾರದ ಬಗ್ಗೆ ಇಡಿ ಇಲಾಖೆ ವಿಜಯೇಂದ್ರ ಅವರ ವಿಚಾರಣೆ ನಡೆಸಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.