‘ಪುಷ್ಪ 2’ನಲ್ಲಿ ಅಲ್ಲು ಅರ್ಜುನ್ ಜತೆ ವಿಜಯ್ ಸೇತುಪತಿ ಫೈಟ್ !

ಬೆಂಗಳೂರು, ಜೂನ್ 29, 2022 (www.justkannada.in): ಪುಷ್ಪ ಭಾಗ ಒಂದು ರಿಲೀಸ್ ಆದ ಬಳಿಕ, ಈ ಚಿತ್ರದ ಮುಂದುವರೆದ ಭಾಗಕ್ಕಗಾಗಿ ಜನ ಕಾಯುತ್ತಿದ್ದಾರೆ. ವಿಶೇಷ ಎಂದರೆ ಚಿತ್ರತಂಡದಿಂದ ಹೊಸ ಸುದ್ದಿ ಹೊರ ಬಿದ್ದಿದೆ.

ಸದ್ಯ ‘ಪುಷ್ಪ 2’ ಚಿತ್ರದ ಚಿತ್ರೀಕರಣವೂ ಬಹುತೇಕ ಮುಗಿದ್ದು, ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಸಿನಿಮಾ ತಂಡ ನಿರತವಾಗಿದೆ.

ಪುಷ್ಪ 2 ಸಿನಿಮಾದಲ್ಲಿ ಮತ್ತಷ್ಟು ಕಲಾವಿದರು ಖಳನಾಯಕರಾಗಿ ಅಬ್ಬರಿಸಲಿದ್ದಾರೆ. ಈ ಸಾಲೊಗೆ ಈಗ ವಿಜಯ್ ಸೇತುಪತಿ ಸೇರಿದ್ದಾರೆ ಎನ್ನಲಾಗುತ್ತಿದೆ.

‘ಪುಷ್ಪ 2’ ತಾರ ಬಳಗದ ಬಗ್ಗೆ ಈಗ ಟಾಲಿವುಡ್‌ನಲ್ಲಿ ಮತ್ತೊಂದು ದಾಖಲೆ ಹಬ್ಬಿದೆ. ಪುಷ್ಪ 2 ಚಿತ್ರದಲ್ಲಿ ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ನಟಿಸುತ್ತಾರೆ ಎನ್ನುವ ಸುದ್ದಿ ಬಂದಿದೆ.

ಅಲ್ಲು ಅರ್ಜುನ್ ಜೊತೆಗೆ ಪುಷ್ಪ ಚಿತ್ರದಲ್ಲಿ ಫಹದ್ ಫಾಸಿಲ್, ಬನ್ವರ್ ಸಿಂಗ್ ಶೇಖಾವತ್ ಪಾತ್ರ ಮಾಡಿದರೆ, ಧನಂಜಯ್, ಸುನಿಲ್, ಷನ್ಮುಖ್, ಅಜಯ್ ಘೋಶ್, ಅನುಸುಯಾ ಭರಧ್ವಜ್ ಸೇರಿದಂತೆ, ಹಲವರು ನಟಿಸಿದ್ದಾರೆ.