ನಟ ಸಲ್ಮಾನ್ ಖಾನ್ ಚಿತ್ರಕ್ಕೆ ರವಿ ಬಸ್ರೂರ್ ಮ್ಯೂಜಿಕ್ !

ಬೆಂಗಳೂರು, ಜೂನ್ 29, 2022 (www.justkannada.in): ನಟ ಸಲ್ಮಾನ್ ಖಾನ್ ಅವರು ‘ಕೆಜಿಎಫ್’ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಅವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ.

ಒಂದು ವಿಶೇಷ ಹಾಡಿಗೆ ಈಗಾಗಲೇ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿನಿಮಾಗೆ ಬಸ್ರೂರ್ ನೀಡಿದ ಹಿನ್ನೆಲೆ ಸಂಗೀತಕ್ಕೆ ಸಲ್ಮಾನ್ ಫಿದಾ ಆಗಿದ್ದಾರೆ.

ಕನ್ನಡಿಗನ ಸಂಗೀತ ಪ್ರತಿಭೆಗೆ ಬಾಯಿಜಾನ್ ಮಾರುಹೋಗಿದ್ದಾರೆ. ಹೀಗಾಗಿ ಅವರು ಬಸ್ರೂರ್ ಅವರಿಗೆ ಮಣೆ ಹಾಕಿದ್ದಾರೆ.

ಸಲ್ಮಾನ್ ಖಾನ್ ಅವರು ಬಸ್ರೂರ್. ಅವರನ್ನು ಸಂಪರ್ಕಿಸದ ಕೂಡಲೇ ಓಕೆ ಹೇಳಿದ್ದಾರೆ. ಈಗಾಗಲೇ ಆಕ್ಷನ್ ಎಂಟರ್ಟೈನ್ ಸಿನಿಮಾಗಾಗಿ ಸ್ಕೋರ್ ರಚಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.