ತೆರೆ ಮೇಲೆ ಮೂಡಿ ಬರಲಿದೆ ಅಟಲ್ ಜೀ ಜೀವನ ಚಿರಿತ್ರೆ

ಬೆಂಗಳೂರು, ಜೂನ್ 29, 2022 (www.justkannada.in): ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನ ಈಗ ಸಿನಿಮಾ ರೂಪದಲ್ಲಿ ಬರಲಿದೆ.

ಹೌದು.  ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಕತೆಯಿರುವ ಸಿನಿಮಾಗೆ ‘ಮೈ ರಹೂಂ ಯಾ ನ ರಹೂಂ ಯೇ ದೇಶ್ ರಹ್ನಾ ಚಾಹಿಯೆ’ ಎಂದು ಟೈಟಲ್ ಇಡಲಾಗಿದೆ.

ಉಲ್ಲೇಖ್ ಎನ್ ಪಿ ಬರೆದಿದ್ದ ದಿ ಅನ್ ಟೋಲ್ಡ್ ವಾಜಪೇಯಿ ಪುಸ್ತಕವನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ವಿನೋದ್ ಭಾನುಶಾಲಿ ಮತ್ತು ಸಂದೀಪ್ ಸಿಂಗ್ ಎಂಬವರು ನಿರ್ಮಾಣ ಮಾಡುತ್ತಿದ್ದಾರೆ.

2023 ರ ಕ್ರಿಸ್ ಮಸ್ ಗೆ ಬಿಡುಗಡೆಯಾಗಲಿದೆ. ಇದೇ ದಿನ ವಾಜಪೇಯಿ ಅವರ ಜನ್ಮದಿನವಿರುವುದು ವಿಶೇಷ.