ಹೊರಬಿತ್ತು ವಿಜಯ್ ದೇವರಕೊಂಡ ‘ಲೈಗರ್’ ಕಲೆಕ್ಷನ್ ರಿಪೋರ್ಟ್

ಬೆಂಗಳೂರು, ಆಗಸ್ಟ್ 27, 2022 (www.justkannada.in): ವಿಜಯ್ ದೇವರಕೊಂಡ ಮತ್ತು ಅನಾನ್ಯ ಪಾಂಡೆ ಅಭಿನಯದ ‘ಲೈಗರ್’ ಮೊದಲ ದಿನವೇ ವಿಶ್ವಾದ್ಯಂತ ರೂ. 33.12 ಕೋಟಿ ಕಲೆಕ್ಷನ್ ಮಾಡಿದೆ.

ಪೂರಿ ಜಗ್ಗನಾಥ್ ನಿರ್ದೇಶನದ ಈ ಚಿತ್ರ ಹಿಂದಿ, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಗುರುವಾರ ಬಿಡುಗಡೆಯಾಗಿದೆ.

ಚಿತ್ರವು ವಿಶ್ವಾದ್ಯಂತ ರೂ 33.12 ಕೋಟಿ ಸಂಗ್ರಹಿಸಿದೆ ಎಂದು ಚಿತ್ರ ನಿರ್ಮಾಪಕರು ಶುಕ್ರವಾರ ಘೋಷಿಸಿದ್ದಾರೆ. ಚಿತ್ರದಲ್ಲಿ ಅರ್ಜುನ್ ರೆಡ್ಡಿ ಕೂಡಾ ದೇವರಕೊಂಡ ಅವರೊಂದಿಗೆ ನಟಿಸಿದ್ದಾರೆ.

ರಮ್ಯಾ ಕೃಷ್ಣ, ರೋನಿತ್ ರಾಯ್ ಮತ್ತು ವಿಶು ರೆಡ್ಡಿ ಕೂಡ ಇದ್ದಾರೆ. ಬಾಕ್ಸಿಂಗ್ ಐಕಾನ್ ಮೈಕ್ ಟೈಸನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಿರೀಕ್ಷೆ ತಲುಪವಲ್ಲಿ ಚಿತ್ರ ವಿಫಲವಾಗಿದೆ ಎನ್ನಲಾಗುತ್ತಿದೆ.