ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಕೊರೋನಾ ಪಾಸಿಟಿವ್

ಬೆಂಗಳೂರು, ಆಗಸ್ಟ್ 27, 2022 (www.justkannada.in): ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಅನುಪಮಾ ಪರಮೇಶ್ವರನ್‌ `ಕಾರ್ತಿಕೇಯನ್’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇನ್ನು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ನಟಿಗೆ ಇದೀಗ ಕೊರೋನಾ ಸೋಂಕು ತಗುಲಿದೆ.

ಸಾಕಷ್ಟು ಕಡೆ ಪ್ರಚಾರ ಕಾರ್ಯದಲ್ಲಿ ತಂಡದ ಜತೆ ಭಾಗಿಯಾಗಿದ್ದ ಅನುಪಮಾ ಶೀತ ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯರನ್ನ ಸಂಪರ್ಕಿಸಿದಾಗ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ.

ತಮ್ಮ ನಿವಾಸದಲ್ಲಿಯೇ ನಟಿ ಕ್ವಾರಂಟೈನಲ್ಲಿದ್ದಾರೆ. ಇನ್ನು `ಕಾರ್ತೀಕೇಯನ್ 2′ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ.