ಹಾಲಿವುಡ್’ನಿಂದ ಅಲ್ಲು ಅರ್ಜುನ್’ಗೆ ಬಂತು ಬುಲಾವ್ !

ಬೆಂಗಳೂರು, ಆಗಸ್ಟ್ 27, 2022 (www.justkannada.in): ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್ ಗೆ ಈಗ ಬಾಲಿವುಡ್‌ನಿಂದಲೂ ಭಾರಿ ಆಫರ್ಸ್ ಬರುತ್ತಿವೆ. ಸದ್ಯ ‘ಪುಷ್ಪ’ ಸಿನಿಮಾದಲ್ಲಿ ನಟಿಸೋಕೆ ಐಕಾನ್ ಸ್ಟಾರ್ ಸಿದ್ಧತೆ ನಡೆಸಿದ್ದಾರೆ.

ಇನ್ನೂ ವಿಶೇಷ ಎಂದರೆ ಅರ್ಜುನ್‌ಗೆ ಹಾಲಿವುಡ್ ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರಿಂದ ಸಿನಿಮಾ ಮಾಡುವಂತೆ ಬುಲಾವ್ ಬಂದಿದೆ ಎಂಬ ಸುದ್ದಿ ಹೊರಬಿದ್ದಿದೆ.

ಹಾಲಿವುಡ್ ನಿರ್ದೇಶಕರೊಬ್ಬರು ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ ಸಿನಿಮಾ ನೋಡಿ ಥ್ರಿಲ್ಲಾಗಿದ್ದಾರಂತೆ. ಸದ್ಯ ತಾವು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ‘ಪುಷ್ಪ’ರಾಜ್‌ಗಾಗಿ ಒಂದು ಪವರ್‌ಫುಲ್ ಪಾತ್ರವನ್ನು ಡಿಸೈನ್ ಮಾಡಿದ್ದಾರಂತೆ.

ಸದ್ಯ ನ್ಯೂಯಾರ್ಕ್‌ ಪ್ರವಾಸದಲ್ಲಿರುವ ಅಲ್ಲು ಅರ್ಜುನ್‌ನ ಭೇಟಿ ಮಾಡಿ ಹಾಲಿವುಡ್ ನಿರ್ದೇಶಕರು ಹಾಗೂ ನಿರ್ಮಾಪಕರು ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.