ಈಗ ಚುನಾವಣೆ ವರ್ಷ ಆರಂಭ, ಈಗಾಗಿ ಆರೋಪಿಸುತ್ತಿದ್ದಾರೆ- ಕೆಂಪಣ್ಣ ಆರೋಪದ ಬಗ್ಗೆ ಸಚಿವ ಬಿ.ಸಿ ಪಾಟೀಲ್ ಟಾಂಗ್.

ಬೆಂಗಳೂರು,ಆಗಸ್ಟ್,27,2022(www.justkannada.in):  ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿರುವ ಕೃಷಿ ಸಚಿವ ಬಿ.ಸಿ ಪಾಟೀಲ್ , ಈಗ ಚುನಾವಣೆ ವರ್ಷ ಆರಂಭ, ಈಗಾಗಿ ಆರೋಪಿಸುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಬಿಸಿ ಪಾಟೀಲ್,  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ವಿಚಾರ ಅವರು ಕಾಂಗ್ರೆಸ್ ಪ್ರಾಯೋಜಿತರು. ಸಿದ್ದರಾಮಯ್ಯರ ಮನೆಗೆ ಹೋಗಿ ಬಂದು ಆರೋಪಿಸಿದ್ದಾರೆ ಎಲ್ಲಾ ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದಿದ್ದಾರೆ.  ಅದರಲ್ಲಿ ಕಾಂಗ್ರೆಸ್ ಪಕ್ಷದವರು ಇದ್ದಾರೆ ಅಂತ ಆಯಿತಲ್ಲ ಎಂದರು.

ಈಗ ಚುನಾವಣೆ ವರ್ಷ ಆರಂಭವಾಗಿದೆ.  ಆರಂಭ  ಹೀಗಾಗಿ ಆರೋಪ ಮಾಡುತಿದ್ದಾರೆ ಎಂದು ಸಚಿವ ಬಿಸಿ ಪಾಟೀಲ್ ಹೇಳಿದರು.

Key words: election – accusing –Minister- B.C. Patil -Tong