ಶಿವಮೊಗ್ಗದಲ್ಲಿ ಮಾರಿಕಾಂಬ ಜಾತ್ರೆಯಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ನಿರ್ಬಂಧ.

 

ಶಿವಮೊಗ್ಗ,ಮಾರ್ಚ್,22,2022(www.justkannada.in): ಹಿಜಾಬ್  ಸಂಬಂಧ ಹೈಕೋರ್ಟ್ ತೀರ್ಪು  ಪ್ರಕಟಿಸುತ್ತಿದ್ದಂತೆ ಕೆಲ ಮುಸ್ಲಿಮರು ತೀರ್ಪನ್ನು ವಿರೋಧಿಸಿದ್ದರು. ಅಲ್ಲದೆ ಭಟ್ಕಳದಲ್ಲಿ ಮುಸ್ಲಿಂ ವರ್ತಕರು ಅಂಗಡಿಗಳನ್ನು ಮುಚ್ಚಿ ವಿರೋಧ ವ್ಯಕ್ತಪಡಿಸಿದ್ದರು.  ಹೈಕೋರ್ಟ್ ತೀರ್ಪು ವಿರೋಧಿಸಿ ಮುಸ್ಲೀಂ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದವು. ಹೀಗಾಗಿ ಕಾಪು ಮಾರಿ ಪೂಜೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯ ಮಾಡಿವೆ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಮಾರಿಗುಡಿ ಹರಾಜಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿಲ್ಲ. ಹಿಂದೂ ದೇಗುಲಗಳಲ್ಲಿ ಮುಸ್ಲಿಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿವಿಧ ದೇಗುಲಗಳ ಮುಂದೆ ಬೇಡಿಕೆ ಇಡಲಾಗಿದೆ. ಮಂಗಳೂರಿನ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಮಧ್ಯೆ ಶಿವಮೊಗ್ಗದ ಮಾರಿಕಾಂಬ ಜಾತ್ರೆಯಲ್ಲೂ ಮುಸ್ಲೀಂ ವ್ಯಾಪಾರಿಗಳಿಗೆ ಅಂಗಡಿ ಹಾಕಲು ನಿರ್ಬಂಧಿಸಲಾಗಿದೆ. ಹೌದು ಶಿವಮೊಗ್ಗದಲ್ಲಿ ಇಂದಿನಿಂದ 5 ದಿನಗಳ ಕಾಲ ಮಾರಿಕಾಂಬ ಜಾತ್ರೆ ನಡೆಯುತ್ತಿದ್ದು  ಜಾತ್ರೆಯಲ್ಲಿ ಅಂಗಡಿ ಹಾಕಲು ಮುಸ್ಲೀಂ ವ್ಯಾಪಾರಿಗಳಿಗೆ ನಿರ್ಬಂಧಿಸಲಾಗಿದೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಬಜರಂಗದಳ ಅಂಗಡಿ ಹಾಕುವ 9 ಲಕ್ಷದ ಟೆಂಡರ್ ಪಡೆದುಕೊಟ್ಟಿದೆ. ಚಿನ್ನಪ್ಪ ಎಂಬುವವರು ಅಂಗಡಿ ಹಾಕಲು ಮುಸ್ಲೀಂ ವ್ಯಾಪಾರಿಗಳಿಗೆ ಟೆಂಡರ್ ನೀಡಿದ್ದರು ಎನ್ನಲಾಗಿದೆ. ಈ ಮಧ್ಯೆ ಬಜರಂಗದಳ ಚಿನ್ನಪ್ಪ ಅವರ ಜತೆ ಚರ್ಚಿಸಿ ಟೆಂಡರ್ ಗಿಟ್ಟಿಸಿಕೊಂಡಿದ್ದು ಇದೀಗ ಜಾತ್ರೆಯಲ್ಲಿ ಸ್ಟಾಲ್ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: shimoga- fair- Muslim traders