Sunday, August 23, 2026

BDA Apartments

Home Cinema ಡಬಲ್ ‘ವಿಜಯ್’ ‘ಮಾಸ್ಟರ್’ ಬ್ಲಾಸ್ಟರ್ !

ಡಬಲ್ ‘ವಿಜಯ್’ ‘ಮಾಸ್ಟರ್’ ಬ್ಲಾಸ್ಟರ್ !

ಬೆಂಗಳೂರು,ಡಿಸೆಂಬರ್,14,2020(www.justkannada.in): ದಳಪತಿ ವಿಜಯ್ ಮತ್ತು ವಿಜಯ ಸೇತುಪತಿ ಮೊದಲ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ.

ಲೋಕೇಶ್ ಕನಗರಾಜ್ ನಿರ್ದೇಶನದ ಮಾಸ್ಟರ್ ಚಿತ್ರದಲ್ಲಿ ಈ ಇಬ್ಬರು ಸ್ಟಾರ್ ನಟರು ಒಟ್ಟಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರವು ಮುಂದಿನ ವರ್ಷ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ. ಈ ಮಧ್ಯೆ ವಿಜಯ್ ಅವರು ಚಿತ್ರಕ್ಕಾಗಿ ಹೊಸ ಯೋಜನೆಯನ್ನು ಮಾಡಿದ್ದಾರೆ ಎಂಬ ಸುದ್ದಿಯೂ ಹೊರ ಬಿದ್ದಿದೆ.

ಚಿತ್ರ ಗೆಲ್ಲುವಂತೆ ಮಾಡಲು ವಿಜಯ್ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ. ಮಾಸ್ಟರ್ ಚಿತ್ರಕ್ಕಾಗಿ ಟಿವಿ ಸಂದರ್ಶನದ ಜತೆಗೆ ತಮಿಳುನಾಡಿನ ಚಿತ್ರಮಂದಿರಗಳಿಗೆ ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ.