ಸೋಂಕಿತ ರೋಗಿಗಳ ಜತೆ ವಿಡಿಯೋ ಸಂವಾದ: ಚಿಕಿತ್ಸೆ, ಶುಚಿತ್ವದ ಬಗ್ಗೆ ಪರಿಶೀಲಿಸಿದ ಸಚಿವ ಡಾ.ಕೆ .ಸುಧಾಕರ್

ಬೆಂಗಳೂರು,ಜು,7,2020(www.justkannada.in):   ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದು ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ವೈದ್ಯರ ಜತೆ ಸಮಾಲೋಚನೆ ನಡೆಸಿದರು.jk-logo-justkannada-logo

ಅಧಿಕಾರಿಗಳ ಜತೆ ಮಾತುಕತೆ ಬಳಿಕ ಸಚಿವ ಸುಧಾಕರ್ ಅವರು ಕೋವಿಡ್ ಐಸಿಯು ಮತ್ತು ವಾರ್ಡುಗಳಲ್ಲಿರುವ ರೋಗಿಗಳ ಜತೆ ವಿಡಿಯೋ ಸಂವಾದ ನಡೆಸಿ ಚಿಕಿತ್ಸೆ ,ಊಟ ಹಾಗೂ ಶುಚಿತ್ವದ ಬಗ್ಗೆ ಖುದ್ದಾಗಿ ಮಾಹಿತಿ ಪಡೆದರು. ಎಲ್ಲಾ ರೋಗಿಗಳು ಸಂಪೂರ್ಣ ತೃಪ್ತಿ ವ್ಯಕ್ತಪಡಿಸಿದರು.

ರೋಗಿಗಳಿಗೆ ನೀಡುವ ಸೌಲಭ್ಯಗಳಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸಚಿವ ಡಾ.ಕೆ ಸುಧಾಕರ್ ತಾಕೀತು ಮಾಡಿದರು. ಶೌಚಾಲಯ ಸ್ವಚ್ಛತೆಯನ್ನೂ ರೋಗಿಯೊಬ್ಬರ ಮೊಬೈಲ್ ನಲ್ಲಿ ವಿಡಿಯೋ ಮೂಲಕ ಪರಿಶೀಲಿಸಿದರು.

Key words: Video conference- corona-patients-minister- Dr K Sudhakar