ಗ್ರಾಮಾಂತರ ಭಾಗದಲ್ಲಿ ಹೋಂ ಕ್ವಾರಂಟೈನ್ ಗೆ ಅವಕಾಶ ಇಲ್ಲ- ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್

ಮೈಸೂರು,ಜು,7,2020(www.justkannada.in): ಹಳ್ಳಿಗಳಲ್ಲಿ ಸೋಂಕಿತ ಪ್ರಕರಣಗಳಿಗೆ ಕ್ವಾರಂಟೈನ್ ಮಾಡಲು ಆಗಲ್ಲ. ಗ್ರಾಮಾಂತರ ಭಾಗದ ಸೋಂಕಿತರಿಗೆ  ಹೋಂ ಕ್ವಾರಂಟೈನ್ ಇಲ್ಲ. ಗ್ರಾಮಾಂತರ ಭಾಗದ ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂದು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.jk-logo-justkannada-logo

ಇಂದು ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಹಳ್ಳಿಗಳಲ್ಲಿ ಸೋಂಕಿತ ಪ್ರಕರಣಗಳಿಗೆ ಕ್ವಾರಂಟೈನ್ ಮಾಡಲು ಆಗಲ್ಲ. ಗ್ರಾಮಾಂತರ ಭಾಗದಲ್ಲಿ ಮನೆಗಳು ಚಿಕ್ಕದಿರುತ್ತವೆ. ಒಂದು ಮನೆಯಲ್ಲಿ ಹೆಚ್ಚು ಜನರು ವಾಸಮಾಡುವುದರಿಂದ ಸೊಂಕು ಹರಡುವಿಕೆ ಹೆಚ್ಚಾಗಬಹುದು. ಹೀಗಾಗಿ ಗ್ರಾಮಾಂತರ ಭಾಗದಲ್ಲಿ ಹೋಂ ಕ್ವಾರಂಟೈನ್ ಗೆ ಅವಕಾಶ ಇಲ್ಲ. ಗ್ರಾಮಾಂತರ ಭಾಗದ ಸೋಂಕಿತರು ಕೋವಿಡ್ ಆಸ್ಪತ್ರೆಗೆ ದಾಖಲಾಗಲೇ ಬೇಕು ಎಂದು ತಿಳಿಸಿದರು.no-home-quarantine-rural-mysore-dho-dr-venkatesh

ನಗರಗಳಲ್ಲಿ ನಿಯಮ ಪಾಲನೆ ಮಾಡುವವರಿಗೆ ಮಾತ್ರ ಹೋಂ ಕ್ವಾರಂಟೈನ್ ಮಾಡಲಾಗುತ್ತದೆ. ಈಗಾಗಲೇ ಮೈಸೂರಿನಲ್ಲಿ 4 ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ಚೆಸ್ಕಾಂ ಸಿಬ್ಬಂದಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಬೇಕಾದ ಚಿಕಿತ್ಸೆ ಆರೋಗ್ಯ ಸಿಬ್ಬಂದಿ ನೀಡುತ್ತಾರೆ. ಆದರೆ ಚಿಕಿತ್ಸೆಗೆ ಬೇಕಾದ ಅಗತ್ಯ ವಸ್ತುಗಳನ್ನು ಅವರೇ ಕೊಳ್ಳಬೇಕು. 17ದಿನ ಕಡ್ಡಾಯವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ಮನೆಯಲ್ಲೇ ಪ್ರತ್ಯೇಕವಾದ ರೂಂ ಹಾಗೂ ಶೌಚಾಲಯ ಹೊಂದಿರಬೇಕು. ನಮ್ಮ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತ್ರ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲು ಅವಕಾಶ ಇರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್  ಹೇಳಿದರು.

Key words: no -home quarantine –rural- mysore- DHO-Dr. Venkatesh.