ಅಪ್ಪು ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆ: 2ಸಾವಿರ ಮಂದಿಗೆ ಅನ್ನ ಸಂತರ್ಪಣೆಗೆ ನಿರ್ಧಾರ

ಬೆಂಗಳೂರು, ನವೆಂಬರ್ 07, 2021 (www.justkannada.in): ನಟ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯತಿಥಿ ಕಾರ್ಯಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಕಂಠೀರವ ಸ್ಟುಡಿಯೋ ಹಾಗೂ ತಮ್ಮ ನಿವಾಸದಲ್ಲಿ ಮಾಡಬೇಕಾದ ಆಚರಣೆಗಾಗಿ ಕುಟುಂಬ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸೋಮವಾರ ಪುಣ್ಯತಿಥಿಯೊಂದಿಗೆ ಸುಮಾರು 2 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡಲು ನಿರ್ಧರಿಸಿದೆ.

ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಸೆಲೆಬ್ರಿಟಿಗಳು, ಅಭಿಮಾನಿಗಳು ಹರಿದುಬರುತ್ತಿದ್ದು, ಭಾನುವಾರ ಬಳ್ಳಾರಿಯಿಂದ ಬಂದಿದ್ದ ಜೋಡಿಯೊಂದು ಮದುವೆಯಾಗಿದೆ.

ಪುನೀತ್ ರಾಜ್ ಕುಮಾರ್ ಸಾಯುವ ಮುನ್ನ ಅವರ ಆರೋಗ್ಯ ಪರಿಸ್ಥಿತಿ ಅರಿಯುವಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಆಕ್ರೋಶ ಮಡುಗಟ್ಟಿದ ನಂತರ ಡಾ. ರಮಣ ರಾವ್ ಅವರ ಕ್ಲಿನಿಕ್ ಹಾಗೂ ಅವರ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.