Sunday, September 20, 2026

BDA Apartments

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(85) ಇನ್ನಿಲ್ಲ BDA JK_Adv BDA Adv
Home Cinema ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(85) ಇನ್ನಿಲ್ಲ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(85) ಇನ್ನಿಲ್ಲ.

ಬೆಂಗಳೂರು,ಡಿಸೆಂಬರ್,8,2023(www.justkannada.in): ಕನ್ನಡ ಚಿತ್ರರಂಗದ ಹಿರಿಯ ನಟಿ  ಲೀಲಾವತಿ(85) ನಿಧನರಾಗಿದ್ದಾರೆ.

ವಯೋಸಹಜ  ಅನಾರೋಗ್ಯದಿಂದ ಬಳಲುತ್ತಿದ್ದ  ಹಿರಿಯ ನಟಿ ಲೀಲಾವತಿ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಲೀಲಾವತಿ ಅವರನ್ನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಹಿರಿಯ ನಟಿ ಲೀಲಾವತಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ(85) ಇನ್ನಿಲ್ಲ leelavati

ಭಕ್ತಪ್ರಹ್ಲಾದ, ಧರ್ಮವಿಜಯ, ರಣಧೀರ ಕಂಠೀರವ, ಗಾಳಿಗೋಪುರ, ವೀರಕೇಶರಿ,  ಭಾಗ್ಯದೇವತೆ,  ಗೆಜ್ಜೆಪೂಜೆ, ಸಿಪಾಯಿರಾಮು , ನಾ ನಿನ್ನ ಮರೆಯಲಾರೆ, ವಸಂತ ಗೀತೆ, ಎರಡು ನಕ್ಷತ್ರಗಳು ಕನ್ನಡದ ಕಂದ ಸೇರಿ 400ಕ್ಕೂ ಹೆಚ್ಚು ಸಿನಿಮಗಳಲ್ಲಿ ಅಭಿನಯಿಸಿದ್ದರು. 2008ರಲ್ಲಿ ತುಮಕೂರು ವಿವಿ  ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

 

Key words: Veteran actress -Leelavati (85) – Kannada film- industry – no more.