ಸಚಿವರು ಹಾಗೂ ಶಾಸಕರು ತಮ್ಮ ತಮ್ಮ ಕೆಲಸಗಳನ್ನ ಮಾಡಲಿ- ಸ್ಪೀಕರ್ ಯುಟಿ ಖಾದರ್ ಸಲಹೆ.

ಬೆಳಗಾವಿ, ಡಿಸೆಂಬರ್, 8,2023(www.justkannada.in):  ಸುವರ್ಣಸೌಧದಲ್ಲಿನ ವೀರ ಸಾವರ್ಕರ್ ಫೋಟೊ ತೆಗೆಯಲು ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಪ್ರತಿಕ್ರಿಯಿಸಿರುವ ಸ್ಪೀಕರ್ ಯು.ಟಿ ಖಾದರ್, ಸಚಿವರು ಹಾಗೂ ಶಾಸಕರು ತಮ್ಮ ತಮ್ಮ ಕೆಲಸಗಳನ್ನ ಮಾಡಲಿ ಎಂದು ಸಲಹೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸ್ಪೀಕರ್ ಯುಟಿ ಖಾದರ್, ಮಂತ್ರಿಗಳು ಮತ್ತು‌ ಶಾಸಕರ ಕೆಲಸ ಸರಿಯಾದ ಸಮಯಕ್ಕೆ ಬರುವುದು, ಉತ್ತಮವಾದ ಚರ್ಚೆಗೆ, ಪ್ರಶ್ನೆಗೆ ಉತ್ತರ ಕೊಡುವಂತಹ ಕೆಲಸಗಳನ್ನ ಚೆನ್ನಾಗಿ ಮಾಡಲಿ ಎಂದರು.

ಸಮಾಜವನ್ನ ಒಗ್ಗಟ್ಟು ಮಾಡುವುದು ನನ್ನ ಜವಾಬ್ದಾರಿ. ಅದು ನನ್ನ ಮೊದಲ ಆಧ್ಯತೆಯಾಗಿದೆ. ಯಾರು ಏನು ಕೆಲಸ ಮಾಡಬೇಕೋ ಅದನ್ನ ಮಾಡಲಿ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ‌ ಈ‌ ರಥವನ್ನ ಮುಂದಕ್ಕೆ ತೆಗೆದುಕೊಂಡು ಹೋಗಿ. ಇಲ್ಲವಾದರೆ ಅಲ್ಲೇ ಇಟ್ಟು ಬಿಡಿ, ಹಿಂದಕ್ಕೆ ಹೋಗಬೇಡಿ ಅಂತ ಡಾ.ಬಿಆರ್ ಅಂಬೇಡ್ಕರ್ ಹೇಳಿದ್ದಾರೆ. ಹಿಂದೆ ಏನಾಗಿದೆ ಅನ್ನೋದು ಬೇಡ. ಮುಂದೆ ಏನಾಗಬೇಕು ಅಂತ ಸಂವಿಧಾನ ಬದ್ಧವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

Key words: ministers – MLAs -their -own work – Speaker -UT Khader.