Tuesday, September 22, 2026

BDA Apartments

ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ಆಕ್ರೋಶ BDA JK_Adv BDA Adv
Home Front Page ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ಆಕ್ರೋಶ.

ರಾಜ್ಯಪಾಲರ ಹಿಂದಿ ಭಾಷಣಕ್ಕೆ ವಾಟಾಳ್ ನಾಗರಾಜ್ ಆಕ್ರೋಶ.

ಮೈಸೂರು,ಜುಲೈ,3,2023(www.justkannada.in): ಇಂದು ರಾಜ್ಯ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದನ್ನ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಖಂಡಿಸಿದ್ದಾರೆ.

ರಾಜ್ಯಪಾಲರ ಭಾಷಣಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್ , ರಾಜ್ಯಪಾಲರ ಭಾಷಣ ರಾಜ್ಯದ ಜನತೆಗೆ ಬರಸಿಡಿಲು ಬಡಿದಂತೆ ಆಗಿದೆ. ಜಂಟಿ ಸದನದಲ್ಲಿ ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ರಾಜ್ಯಪಾಲರು ಕರ್ನಾಟಕದಲ್ಲಿ ಕನ್ನಡ ಮರೆತು ಭಾಷಣ ಮಾಡಬಾರದಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಂಟಿ ಅಧಿವೇಶನದಲ್ಲಿ ಎಲ್ಲಾ ಪಕ್ಷದ ನಾಯಕರು ಇದ್ದರು. ಆದ್ರೇ ಯಾರಿಗೂ ಮಾನ ಮರ್ಯಾದೆ ಇರಲಿಲ್ಲ. ಯಾರು ಸಹ ಇದನ್ನು ಪ್ರಶ್ನೆ ಮಾಡುವ ಪ್ರಯತ್ನ ಮಾಡಲಿಲ್ಲ. ಹಿಂದಿ ಭಾಷಣ ಬೇಡ ಎನ್ನುವ ಶಕ್ತಿ ಯಾವ ನಾಯಕರಿಗೂ ಇಲ್ಲ. ಈ ಹಿಂದಿ ಭಾಷಣವನ್ನ ನಾನು ಖಂಡಿಸುತ್ತೇನೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.

Key words: Vatal Nagaraj -outraged – Governor’s –Hindi- speech.