ವಿಧಾನಪರಿಷತ್: ಈಶಾನ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ಸ್ಪರ್ಧೆ….

ಕಲ್ಬುರ್ಗಿ,ಅಕ್ಟೋಬರ್,8,2020(www.justkannada.in): ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್  ಕಣಕ್ಕಿಳಿದಿದ್ದಾರೆ.jk-logo-justkannada-logo

ಹೌದು, ಕನ್ನಡ ಚಳವಳಿ ನಾಯಕ ವಾಟಾಳ್ ನಾಗರಾಜ್ ಇಂದು  ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಮತ ಕ್ಷೇತ್ರದ ಅಭ್ಯರ್ಥಿಯಾಗಿ ಗುಲ್ಬರ್ಗಾದ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆನೊಳಗೊಂಡಿರುವ ಈಶಾನ್ಯ ಪದವಿಧರ ಶಿಕ್ಷಕರ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸರುವ ಮೂಲಕ ವಾಟಾಳ್ ಅವರು ಕುತೂಹಲ ಮೂಡಿಸಿದ್ದಾರೆ

ಬಳಿಕ ಮಾಧ್ಯಮದ ಜತೆ ಮಾತನಾಡಿದ ವಾಟಾಳ್ ನಾಗರಾಜ್,  ಸಮಗ್ರ ಚುನಾವಣಾ ವ್ಯವಸ್ಥೆ ಬದಲಾಗಬೇಕು. ಪ್ರಾಮಾಣಿಕರು ಶಾಸನ ಸಭೆಗೆ ಆಯ್ಕೆಯಾಗಬೇಕು ಎಂದರು. ಇಂದು ರಾಜ್ಯಸಭೆ ವಿಧಾನಪರಿಷತ್ ನಲ್ಲಿ ಚಿಂತಕರ ಬದಲು ವ್ಯಾಪಾರಿಗಳೇ ತುಂಬಿದ್ದಾರೆ ಎಂದರು.vatal-nagaraj-candidate-legislative-council-northeast-teacher-constituency

ಶಾಲೆ ಆರಂಭ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಯಾವುದೇ ಕಾರಣಕ್ಕೂ ಶಾಲೆಗಳನ್ನ ತೆರೆಯಬಾರದೆಂದು  ಆಗ್ರಹಿಸಿದರು.

Key words: Vatal Nagaraj – candidate – legislative council-Northeast Teacher constituency.