ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ…

ಬೆಂಗಳೂರು,ಅಕ್ಟೋಬರ್,8,2020(www.justkannada.in):  ಬೆಂಗಳೂರಿನಲ್ಲಿ ಇಬ್ಬರು ಶಂಕಿತ ಉಗ್ರರನ್ನ ಎನ್ ಐಎ ಅಧಿಕಾರಿಗಳು ಬಂಧಿಸಿದ್ದಾರೆ.jk-logo-justkannada-logo

ಇರ್ಫಾನ್ ನಸೀರ್(33), ತಮಿಳುನಾಡು ಮೂಲದ ಅಹ್ಮದ್ ಅಬ್ದುಲ್(40) ಬಂಧಿತ ಶಂಕಿತ ಉಗ್ರರು. ಬಂಧಿತ ಇರ್ಫಾನ್ ನಾಸೀರ್ ಫ್ರೆಜರ್ ಟೌನ್ ಗುರಪ್ಪನಪಾಳ್ಯದಲ್ಲಿ ವಾಸಮಾಡುತ್ತಿದ್ದು ಅಕ್ಕಿ ಮಾರಾಟ ಮಾಡುತ್ತಿದ್ದನು. ಈ ನಡುವೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನ ಬಂಧಿಸಿದ್ದಾರೆ.  ಬಂಧಿತ ಇಬ್ಬರು ಐಸಿಸಿ ಉಗ್ರ ಚಟುವಟಿಕೆಯನ್ನ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.two-suspected-terrorist-arrested-bangalore

ಶಂಕಿತ ಉಗ್ರರಿಬ್ಬರನ್ನು ಎನ್ ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಂಕಿತರ ಬಳಿ ಇದ್ದ ಎಲೆಕ್ಟ್ರಾನಿಕ್ ಡಿವೈಸ್ ಹಾಗೂ ಟೆಕ್ನಿಕಲ್ ಸಾಕ್ಷ್ಯಗಳನ್ನ ಎನ್ ಐಎ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.

Key words: Two -suspected –terrorist- arrested -Bangalore