ಮೈಸೂರು ವಿವಿಯ ಎಂ.ಟೆಕ್ ಮೆಟಿರಿಯಲ್ಸ್ ಸೈನ್ಸ್ ಕೋರ್ಸ್ ಗೆ ಅರ್ಜಿ ಆಹ್ವಾನ

ಮೈಸೂರು,ಅಕ್ಟೊಬರ್,08,2020(www.justkannada.in) : ಮೈಸೂರು ವಿಶ್ವವಿದ್ಯಾನಿಲಯವು ಎಂ.ಟೆಕ್ ಮೆಟಿರಿಯಲ್ಸ್ ಸೈನ್ಸ್ ಕೋರ್ಸ್ ಗೆ ಅರ್ಜಿ ಆಹ್ವಾನಿಸಿದೆ.jk-logo-justkannada-logoಯುಜಿಸಿ ಪ್ರಾಯೋಜಕತ್ವದಲ್ಲಿ ಈ ಕೋರ್ಸ್ ಆರಂಭಿಸಿದ್ದು, ಬಿಇ, ಎಂಬಿಬಿಎಸ್, ಬಿ.ಟೆಕ್, ಬಿ.ಫಾರ್ಮ್, ಬಿಡಿಎಸ್, ಬಿ.ಎಸ್ಸಿ, ಎಂ.ಎಸ್ಸಿ ಮತ್ತು ಬಿ.ಎಸ್ಸಿ ಪದವೀಧರರು ಅರ್ಜಿ ಸಲ್ಲಿಸಬಹುದು. 30 ಮಂದಿಗೆ ಅವಕಾಶವಿದ್ದು, ಎ ಸ್ಕೀಮ್ ನಲ್ಲಿ(ಮೆರಿಟ್) 15 ಮಂದಿಗೆ ಹಾಗೂ ಬಿ ಸ್ಕೀಮ್ ನಲ್ಲಿ 15 ಮಂದಿಗೆ ಅವಕಾಶ ಕಲ್ಪಿಸಲಾಗಿದೆ.Applications-invited-M.Tech-Materials Science-Course-Mysore Viviವಿಜ್ಞಾನಭವನದಲ್ಲಿ ಅತ್ಯಾಧುನಿಕ ಸಂಶೋಧನೆಗೆ ಬೇಕಾದ ತಂತ್ರಜ್ಞಾನಗಳು ಇರುವುದರಿಂದ ವಿಜ್ಞಾನ ಭವನದಲ್ಲಿಯೇ ಈ ಕೋರ್ಸ್ ಆರಂಭಿಸಲಾಗುತ್ತಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಸೂಕ್ಷ್ಮಜೀವ ವಿಜ್ಞಾನ, ಪಾಲಿಮರ್ ವಿಜ್ಞಾನ, ಭೂ ವಿಜ್ಞಾನ ಪ್ರಾಧ್ಯಾಪಕರು ಈ ಕೋರ್ಸ್ ನ ಪಠ್ಯ ಸಿದ್ಧಪಡಿಸಲಿದ್ದಾರೆ.

ಆಸಕ್ತರು ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅ.17 ಕಡೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ www.uni-mysore.in  ವೆಬ್ ಸೈಟ್ ಗೆ ಭೇಟಿ ನೀಡಬಹುದು ಅಥವಾ ಮೊ.ಸಂ.9448275348 ಸಂಪರ್ಕಿಸಬಹುದು ಎಂದು ಎಂ.ಟೆಕ್ ವಸ್ತು ಮೆಟಿರಿಯಲ್ಸ್ ಸೈನ್ಸ್  ಕೋರ್ಸ್ ಸಂಯೋಜಕ ಡಾ.ಎಸ್.ಶ್ರೀಕಂಠಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words : Applications-invited-M.Tech-Materials Science-Course-Mysore Vivi