Friday, August 21, 2026

BDA Apartments

Home Front Page ವರುಣಾದಲ್ಲಿ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ವಿ.ಸೋಮಣ್ಣ ಸ್ಪರ್ಧೆ- ಸಂಸದ ಪ್ರತಾಪ್ ಸಿಂಹ.

ವರುಣಾದಲ್ಲಿ ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ವಿ.ಸೋಮಣ್ಣ ಸ್ಪರ್ಧೆ- ಸಂಸದ ಪ್ರತಾಪ್ ಸಿಂಹ.

ಮೈಸೂರು,ಏಪ್ರಿಲ್,21,2023(www.justkannada.in):  ವರುಣಾದಲ್ಲಿ  ಮಾಜಿ ಸಿಎಂ ಸಿದ್ದರಾಮಯ್ಯ ತಕಥೈ ತಕಥೈ ಅಂತಾ ಕುಣಿಯುತ್ತಿದ್ದರು. ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು  ಹೈಕಮಾಂಡ್  ವಿ.ಸೋಮಣ್ಣರನ್ನ ಕಳಿಸಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಪ್ರತಾಪ್ ಸಿಂಹ, ಸಿದ್ಧರಾಮಯ್ಯ ಓಟಕ್ಕೆ ಬ್ರೇಕ್ ಹಾಕಲು ಸೋಮಣ್ಣರನ್ನ  ಸ್ಪರ್ಧೆಗಿಳಿಸಲಾಗಿದೆ. ವಿ. ಸೋಮಣ್ಣ ಸ್ಪರ್ಧೆಯಿಂದಾಗಿ ಸೋಲಿನ ಭಯ ಶುರುವಾಗಿದೆ. ಹೀಗಾಗಿ ಸಿದ್ಧರಾಮಯ್ಯ ತಮ್ಮ ಮೊಮ್ಮಗನನ್ನ ಕರೆ ತಂದಿದ್ದಾರೆ.  ಜಾತಿವಾದಿ ಕಾಂಗ್ರೆಸ್ ಜೆಡಿಎಸ್ ಮಟ್ಟಹಾಕಬೇಕು  ಎಂದು ಕಿಡಿ ಕಾರಿದರು.

ವರುಣಾಗೆ ವಿ.ಸೋಮಣ್ಣ ಬರಲು ಅವರು ಯಾರು ಎಂದು ಪ್ರಶ್ನಿಸಿದ್ದ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಸಂಸದ ಪ್ರತಾಪ್ ಸಿಂಹ, ಸಿದ್ಧರಾಮಯ್ಯಗೂ ಬಾದಾಮಿಗೂ ಏನು ಸಂಬಂಧ..?  ಸೋನಿಯಾ ಗಾಂಧಿಗೂ ಬಳ್ಳಾರಿಗೂ ಏನು ಸಂಬಂಧ..?  ಮಾತೆತ್ತಿದ್ದರೆ 10 ಕೆಜಿ  ಅಕ್ಕಿ ಕೊಡ್ತೇನೆ ಅಂತಾರೆ. ಸಿದ್ಧರಾಮನಹುಂಡಿ ಗದ್ದೆಯಲ್ಲಿ ತಂದಿ ಕೊಡ್ತಾರಾ…? ಎಂದು ವಾಗ್ದಾಳಿ ನಡೆಸಿದರು.

ಪ್ರತಾಪ್ ಸಿಂಹಗೆ ವರುಣಾದಲ್ಲಿ ತರಾಟೆ..

ಇನ್ನು ವರುಣಾದಲ್ಲಿ ಮತ ಕೇಳಲು ಹೋಗಿದ್ದ ಸಂಸದ ಪ್ರತಾಪ್ ಸಿಂಹಗೆ ವರುಣಾ ಕ್ಷೇತ್ರದ ಜನತೆ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಅಂಬೇಡ್ಕರ್ ಸಂವಿಧಾನವನ್ನೆ ಬದಲು ಮಾಡ್ತೀನಿ ಅಂತೀರಾ. ನಾವು ಯಾಕೆ ಬೆಂಬಲ‌ ನೀಡಬೇಕು. ಪ್ರಧಾನಿ ಮೋದಿಯದ್ದು ಅಕ್ಕಿ ಸಿದ್ಧರಾಮಯ್ಯರದ್ದು ಚೀಲ ಎಂದು ಟೀಕಿಸುತ್ತೀರಿ . ಶ್ರೀನಿವಾಸ ಪ್ರಸಾದ ಗೆದ್ದ ಬಳಿಕ ಒಂದು ದಿನವೂ ಸಮಸ್ಯೆ ಕೇಳಲು ಬಂದಿಲ್ಲ ಎಂದು ಜನರು ಸಂಸದ ಪ್ರತಾಪ್ ಸಿಂಹಗೆ ಪ್ರಶ್ನಿಸಿದರು. ವರುಣ ಮತದಾರರ ಪ್ರಶ್ನೆಗೆ ಸಂಸದ ಪ್ರತಾಪ್ ಸಿಂಹ ಕಕ್ಕಾಬಿಕ್ಕಿಯಾದರು.

Key words: varuna-former CM- Siddaramaiah-MP-Prathap simha