Sunday, September 20, 2026

BDA Apartments

ಯತೀಂದ್ರ ಸಿದ್ಧರಾಮಯ್ಯಗೆ ವರುಣಾ ಕ್ಷೇತ್ರದ ಟಿಕೆಟ್: ಪರೋಕ್ಷ ಸುಳಿವು ನೀಡಿದ ...
Home Front Page ಯತೀಂದ್ರ ಸಿದ್ಧರಾಮಯ್ಯಗೆ ವರುಣಾ ಕ್ಷೇತ್ರದ ಟಿಕೆಟ್: ಪರೋಕ್ಷ ಸುಳಿವು ನೀಡಿದ ಡಿ.ಕೆ ಶಿವಕುಮಾರ್.

ಯತೀಂದ್ರ ಸಿದ್ಧರಾಮಯ್ಯಗೆ ವರುಣಾ ಕ್ಷೇತ್ರದ ಟಿಕೆಟ್: ಪರೋಕ್ಷ ಸುಳಿವು ನೀಡಿದ ಡಿ.ಕೆ ಶಿವಕುಮಾರ್.

ಮೈಸೂರು, ಫೆಬ್ರವರಿ,21,2023(www.justkannada.in): ವರುಣಾ ವಿಧಾನಸಭಾ ಕ್ಷೇತ್ರದಿಂದ  ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಸಿದ್ದರಾಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರೋಕ್ಷ ಸುಳಿವು ನೀಡಿದ್ದಾರೆ.

ಮೇಘಳಾಪುರ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಯತೀಂದ್ರ ಸಿದ್ದರಾಮಯ್ಯ ನಿಮ್ಮ ಶಾಸಕರಾಗಿರುವುದು ಭಾಗ್ಯ. ಸಿದ್ದರಾಮಯ್ಯ ಅವರಿಗೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಂತುಕೊಳ್ಳುವ ಶಕ್ತಿ ನೀಡಿದ್ದೀರಿ. ವರುಣಾ ಕ್ಷೇತ್ರದ ಜನರ ಸಹಾಯ ಮರೆಯಲು ಸಾಧ್ಯವಿಲ್ಲ ಎಂದರು.

ವರುಣಾ ಕ್ಷೇತ್ರದಿಂದ ಸದ್ಯ ಯತೀಂದ್ರ ಒಬ್ಬರೇ ಅರ್ಜಿ ಹಾಕಿದ್ದಾರೆ. ಈ ಬಾರಿ ವರುಣಾದಲ್ಲಿ ಯತೀಂದ್ರ ಸಿದ್ಧರಾಮಯ್ಯ ಅವರನ್ನು ಹೆಚ್ಚು ಮತ ನೀಡಿ ಗೆಲ್ಲಿಸಿ.  ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.

Key words: Varuna- Constituency -ticket -Yathindra Siddaramaiah-DK Shivakumar