ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಅವರಿಗೆ ಸರ್ಕಾರದಿಂದ ನೋಟಿಸ್: ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರುವಂತೆ ಸೂಚನೆ

ಬೆಂಗಳೂರು,ಫೆಬ್ರವರಿ,21,2023(www.justkannada.in):  ಇಬ್ಬರು ಅಧಿಕಾರಿಗಳಾದ ಡಿ.ರೂಪಾ ಮೌದ್ಗಿಲ್ ಮತ್ತು ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟದಿಂದ ಮುಜುಗರಕ್ಕೀಡಾಗಿರುವ ರಾಜ್ಯ ಸರ್ಕಾರ ಇದೀಗ ಇಬ್ಬರು ಅಧಿಕಾರಿಗಳಿಗೆ ನೋಟಿಸ್ ನೀಡಿದೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಅವರಿಗೆ ನೋಟಿಸ್ ನೀಡಿರುವ   ಸಿಬ್ಬಂದಿ ಆಡಳಿತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್, ಬಹಿರಂಗ ಹೇಳಿಕೆ ನೀಡದಂತೆ, ಫೇಸ್ ಬುಕ್ ಪೋಸ್ಟ್ ಹಾಕದಂತೆ ಇಬ್ಬರಿಗೆ ಸೂಚನೆ ನೀಡಿದ್ದಾರೆ.

ಇಬ್ಬರ ವರ್ತೆಯಿಂದ ಸರ್ಕಾರಕ್ಕೆ ಮುಜುಗರ ಉಂಟಾಗಿದೆ  ಇದು ಭಾರತೀಯ ಸರ್ವಿಸ್ ನಿಯಮ ಉಲ್ಲಂಘನೆಯಾಗಿದೆ.  ನಿಮಗೆ ಆರೋಪ ಮಾಡಲು ಸೂಕ್ತ ವೇದಿಕೆ ಇದೆ. ಸಕ್ಷಮ ಪ್ರಾಧಿಕಾರದ ಮುಂದೆ ಆರೋಪ ಮಾಡಬಹುದು.  ಆದರೆ ಮಾಧ್ಯಮದ ಮುಂದೆ ಆರೋಪ ಮಾಡಿದ್ದೀರಾ..? ಹೀಗಾಗಿ ಮಾಧ್ಯಮದ ಮುಂದೆ ಹೋಗಬಾರದು ಇಬ್ಬರು ಅಧಿಕಾರಿಗಳು ಅಖಿಲ ಭಾರತ ಸೇವಾ ನಿಯಮಕ್ಕೆ ಬದ್ಧರಾಗಿರುವಂತೆ ಸೂಚನೆ  ನೀಡಲಾಗಿದೆ.

Key words: Govt – Notice – D. Rupa – Rohini Sindhuri- public- statement.