Wednesday, August 5, 2026

BDA Apartments

Home Cinema ಸುದೀಪ್ ಆರೋಗ್ಯದಲ್ಲಿ ವ್ಯತ್ಯಯ: ಬಿಗ್ ಬಾಸ್ ವಾರಾಂತ್ಯಕ್ಕೆ ಕಿಚ್ಚ ಇಲ್ಲ

ಸುದೀಪ್ ಆರೋಗ್ಯದಲ್ಲಿ ವ್ಯತ್ಯಯ: ಬಿಗ್ ಬಾಸ್ ವಾರಾಂತ್ಯಕ್ಕೆ ಕಿಚ್ಚ ಇಲ್ಲ

ಬೆಂಗಳೂರು, ಏಪ್ರಿಲ್ 16, 2021 (www.justkannada.in): ನಟ ಸುದೀಪ್ ಆರೋಗ್ಯದಲ್ಲಿ ವ್ಯತ್ಯಯವಾಗಿದ್ದು, ಈ ವಾರಾಂತ್ಯದ ಬಿಗ್ ಬಾಸ್ ಸಂಚಿಕೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಈ ವಿಷಯವನ್ನು ಸ್ವತಃ ಕಿಚ್ಚ ಸ್ಪಷ್ಟಪಡಿಸಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಸೇರಿದಂತೆ ಸಿನಿಮಾ ಚಿತ್ರೀಕರಣದಲ್ಲಿಯೂ ಸುದೀಪ್ ಪಾಲ್ಗೊಳ್ಳುತ್ತಿಲ್ಲ.

ಟ್ವಿಟ್ಟರ್ ನಲ್ಲಿ ತಾವು ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಶೋ ತಂಡ ಇದನ್ನು ಹೇಗೆ ಕ್ರಿಯೇಟಿವ್ ಆಗಿ ನಿರ್ವಹಿಸಲಿದೆ ಎಂಬುದನ್ನು ಕಾದು ನೋಡಿ ಎಂದು ಸುದೀಪ್ ಬರೆದುಕೊಂಡಿದ್ದಾರೆ.

ಕಿಚ್ಚ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಅಂದಹಾಗೆ ಸುದೀಪ್ ಅವರ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ದ ಬಿಡುಗಡೆ ದಿನಾಂಕ ಇಂದಷ್ಟೆ ಘೋಷಣೆಯಾಗಿದೆ. ಸಿನಿಮಾವು ಆಗಸ್ಟ್ 19 ರಂದು ಬಿಡುಗಡೆ ಆಗಲಿದೆ.