Wednesday, August 12, 2026

BDA Apartments

Home Front Page ಲಸಿಕೆ ನೀಡೋದು ಸಾವನ್ನ ತಪ್ಪಿಸೋಕೆ:ಸೋಂಕೇ ಆಗೋದಿಲ್ಲ ಎಂದು ಎಲ್ಲೂ ಹೇಳಿಲ್ಲ- ಸಚಿವ ಡಾ.ಕೆ ಸುಧಾಕರ್.

ಲಸಿಕೆ ನೀಡೋದು ಸಾವನ್ನ ತಪ್ಪಿಸೋಕೆ:ಸೋಂಕೇ ಆಗೋದಿಲ್ಲ ಎಂದು ಎಲ್ಲೂ ಹೇಳಿಲ್ಲ- ಸಚಿವ ಡಾ.ಕೆ ಸುಧಾಕರ್.

ಬೆಂಗಳೂರು,ಜನವರಿ,19,2022(www.justkannada.in) ಲಸಿಕೆ ನೀಡೋದು ಕೊರೋನಾದಿಂದ ಸಾವನ್ನ ತಪ್ಪಿಸೋಕೆ. ಆದರೆ ಲಸಿಕೆ ಹಾಕಿಸಿಕೊಂಡರೇ ಸೋಂಕೇ ಆಗೋದಿಲ್ಲ ಎಂದು ಎಲ್ಲೂ ಹೇಳಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸುಧಾಕರ್, ಇದು ಜನರಪರ ಸರ್ಕಾರ ಜನರಿಗೆ ತೊಂದರೆ ಆಗಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಜನರ ಜೀವ ಉಳಿಸೋದು ನಮ್ಮ ಆದ್ಯತೆ.  ಶುಕ್ರವಾರ ಸಿಎಂ ನೇತೃತ್ವದಲ್ಲಿ ಮೀಟಿಂಗ್ ಇದೆ. ಸಿಎಂ ಸಭೆಯಲ್ಲಿ ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ದಾರ ತೆಗದುಕೊಳ್ಳುತ್ತೇವೆ. ಸೋಂಕಿನ ತೀವ್ರತೆ ಆದರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಜನರ ಜೀವನ ಸುಗಮವಾಗಿ ನಡೆಯಬೇಕು, ಆ ನಿಟ್ಟಿನಲ್ಲಿ ಕೊರೋನಾ ತಡೆಗೆ ಲಸಿಕೆ ಒಂದೇ ಮಾರ್ಗ ಎಂದು ತಿಳಿಸಿದರು.

Key words: Vaccine –avoids- death-Minister -Dr K Sudhakar.