ಯುಟರ್ನ್ ಮಾಡಿದ್ರೆ, ಕ್ಲೀನ್ ಚಿಟ್ ಕೊಟ್ರೆ ಬಿಲ್ ಸಿಗುತ್ತಾ..? ಕೆಂಪಣ್ಣಗೆ ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ.

ಬೆಂಗಳೂರು, ಆಗಸ್ಟ್ 11,2023(www.justkannada.in):  ಸಚಿವರು ಯಾವುದೇ ಕಮಿಷನ್ ಕೇಳಿಲ್ಲ. ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿಲ್ಲ ಎಂದು  ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಯುಟರ್ನ್ ಮಾಡಿದ್ರೆ, ಕ್ಲೀನ್ ಚಿಟ್ ಕೊಟ್ರೆ ಬಿಲ್ ಸಿಗುತ್ತಾ..? ಎಂದು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ,  ಈ‌ ಹಿಂದೆ ಇದೇ ಕೆಂಪಣ್ಣ ನಮ್ಮ ವಿರುದ್ಧ ಆರೋಪ ಮಾಡಿದ್ದರು. ಈಗ ಕಾಂಟ್ರ್ಯಾಕ್ಟರ್‌ ಗಳೇ ಆರೋಪ ಮಾಡುತ್ತಿದ್ದಾರೆ. ನೀವು ಯುಟರ್ನ್ ಮಾಡಿದರೆ, ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಸಿಗುತ್ತದಾ? ಸರಿಯಾಗಿ ಕೆಲಸ ಮಾಡಿದ ಕಾಂಟ್ರ್ಯಾಕ್ಟರ್‌ ಗಳಿಗೆ ಹಣ ಸಿಗದ ಕಾರಣಕ್ಕೆ ರಾಜ್ಯಪಾಲರ ಬಳಿ ಹೋಗಿದ್ದಾರೆ. ಮೂರ್ನಾಲ್ಕು ತಿಂಗಳಲ್ಲಿ ಸಂಗ್ರಹ ಮಾಡಿದ ಹಣವನ್ನೂ ಬಿಬಿಎಂಪಿ ಕೊಡುತ್ತಿಲ್ಲ. ಸರ್ಕಾರದ ಹಣವನ್ನೂ ಕೊಡುತ್ತಿಲ್ಲ. ಕಾಂಟ್ರ್ಯಾಕ್ಟರ್‌ ಗಳು ದಯಾಮರಣ ಕೋರುವ ಸಂದರ್ಭ ಇಲ್ಲಿವರೆಗೆ ಬಂದಿರಲಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಸಮಯದಲ್ಲಿ ಹಣ ಬಿಡುಗಡೆ ಆಗಿಲ್ಲ ಎಂಬ ಆರೋಪ ಕುರಿತು ಮಾತನಾಡಿದ ಬಸವರಾಜ ಬೊಮ್ಮಾಯಿ, ಡಿಕೆ ಶಿವಕುಮಾರ್ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಏನೇನು ಮಾಡಿದೆ ಎನ್ನುವುದು ಕಾಂಟ್ರ್ಯಾಕ್ಟರ್ ಗಳಿಗೇ ಗೊತ್ತಿದೆ. ಹಣವನ್ನು ಹಿಡಿದುಕೊಂಡಿರುವುದರಿಂದ ಅನುಮಾನಗಳು ಹೆಚ್ಚುತ್ತಿವೆ. ಹಣ ಬಿಡುಗಡೆ ಮಾಡಿ ಬಿಟ್ಟಿದ್ದರೆ ಅನುಮಾನವೇ ಇರುತ್ತಿರಲಿಲ್ಲ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.

Key words: Uturn-clean chit -bill? Former CM- Bommai- question -Kempanna.