ನನ್ನ ಬಳಿಯೂ ಪೆನ್ ಡ್ರೈವ್ ಇರುವುದು ಸತ್ಯ- ಶಾಸಕ ಲಕ್ಷ್ಮಣ್ ಸವದಿ.

ಬೆಳಗಾವಿ,ಆಗಸ್ಟ್,11,2023(www.justkannada.in):  ಸರ್ಕಾರ ವಿರುದ್ಧ ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ  ಪೆನ್​ ಡ್ರೈವ್ ಬಾಂಬ್ ಸಿಡಿಸಿದ್ದರು. ಈ ನಡುವೆ ಇದೀಗ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಸಹ ಪೆನ್​ಡ್ರೈವ್ ಬಾಂಬ್ ಹಾಕಿದ್ದಾರೆ.

ಹೌದು ಇಂದು ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ನನ್ನ ಬಳಿ ಪೆನ್​ಡ್ರೈವ್​ ಇರುವುದು ಸತ್ಯ. ಯಾರು ಏನೇನು ಕುತಂತ್ರ ಮಾಡುತ್ತಿದ್ದರು ಎಂಬ ಕುರಿತ ಪೆನ್ ​ಡ್ರೈವ್​ನಲ್ಲಿದೆ ಎಂದು  ಹೇಳಿದ್ದಾರೆ.

ಬಿಜೆಪಿ ಅವಮಾನ ಮಾಡಿದ್ದಕ್ಕೆ ನಾನು ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ. ಯಾರ್ಯಾರು ಪಕ್ಷದಲ್ಲಿ ಕಾಲು ಎಳೆಯುವ ಕೆಲಸ ಮಾಡುತ್ತಿದ್ದರು. ಏನೇನು ಇತ್ತು ಎನ್ನುವುದು ನನ್ನ ಹತ್ತಿರ ಪೆನ್‌ ಡ್ರೈವ್ ಇದೆ. ಯಾರಾದರೂ ಸವಾಲು ಹಾಕಿದ್ರೆ ಪೆನ್ ಡ್ರೈವ್ ತೋರಿಸುತ್ತೇನೆ.  ಪೆನ್ ಡ್ರೈವ್  ತೋರಿಸಿದ ಮೇಲೆ ಗೊತ್ತಾಗುತ್ತೆ ಯಾರದ್ದು ಅಂತಾ ಎಂದರು.

ಅವರು ಬುಟ್ಟಿಯಲ್ಲಿ ಹಾವಿದೆ ಹಾವಿದೆ ಅಂತಿದ್ದಾರೆ. ಹಾಗಾದರೆ ನಮ್ಮ ಬುಟ್ಟಿಯಲ್ಲೂ ಹಾವಿದೆ. ಅವರ ಪೆನ್ ಡ್ರೈವ್ ನಲ್ಲಿ ಏನಿದೆಯೋ ಅದಕ್ಕೆ ಸರಿಸಮನಾಗಿ ನಮ್ಮ ಪೆನ್ ಡ್ರೈವ್ ನಲ್ಲೂ ದಾಖಲೆ ಇದೆ ಎಂದು ಲಕ್ಷ್ಮಣ್ ಸವದಿ ಹೇಳಿದರು.

Key words: true -I have – pen drive-MLA -Laxman Savadi.