Thursday, August 13, 2026

BDA Apartments

Home Front Page ಅಹಮದಾಬಾದ್ ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನ: ಶಿಷ್ಟಾಚಾರ ಮುರಿದು ಟ್ರಂಪ್ ಸ್ವಾಗತಿಸಿದ ಪ್ರಧಾನಿ...

ಅಹಮದಾಬಾದ್ ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನ: ಶಿಷ್ಟಾಚಾರ ಮುರಿದು ಟ್ರಂಪ್ ಸ್ವಾಗತಿಸಿದ ಪ್ರಧಾನಿ ಮೋದಿ….

ಗುಜರಾತ್,ಫೆ,24,2020(www.justkannada.in):  ಭಾರತಕ್ಕೆ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಪತ್ನಿಯೊಂದಿಗೆ ಇಂದು ಗುಜರಾತ್ ನ ಅಹಮದಾಬಾದ್ ಗೆ ವಿಶೇಷ ವಿಮಾನದ ಮೂಲಕ ಆಗಮಿಸಿದರು.

ಭಾರತಕ್ಕೆ ಆಗಮಿಸಿದ ಡೊನಾಲ್ಡ್ ಟ್ರಂಪ್ ಗೆ ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರ ಮುರಿದು ಸ್ವಾಗತ ಕೋರಿದರು. ಇನ್ನು ಪತ್ನಿ ಜತೆ ಆಗಮಿಸಿರುವ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಚೊಚ್ಚಲ ಭೇಟಿಯಾಗಿದೆ. ಅಮೆರಿಕದಿಂದ ಹೊರಟ ಟ್ರಂಪ್ ಹಾಗೂ ಅವರ ಪತ್ನಿ ಮೆಲಾನಿಯಾ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದದರು,.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರಿಂದ ಟ್ರಂಪ್ ಗೆ ಸ್ವಾಗತ ಕೋರಿದ್ದಾರೆ. ಮೊದಲಿಗೆ ಟ್ರಂಪ್ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ನಂತರ ಮೋಟೆರಾ ಸ್ಟೇಡಿಯಂನಲ್ಲಿ ರೋಡ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ.

Key words: US President- Donald Trump -Arrives – Ahmedabad-Prime Minister – Modi – welcomed