Sunday, October 25, 2026

Dasara Wishes

Happy Dasara
Home Cinema ವಿಂಗ್ ಕಮಾಂಡರ್ ಅಭಿನಂದನ್ ಬಯೋಪಿಕ್’ನಲ್ಲಿ ಚಾಲೆಂಜಿಂಗ್ ಸ್ಟಾರ್?! ನಿರ್ಮಾಪಕ ಮುನಿರತ್ನ ಘೋಷಣೆ

ವಿಂಗ್ ಕಮಾಂಡರ್ ಅಭಿನಂದನ್ ಬಯೋಪಿಕ್’ನಲ್ಲಿ ಚಾಲೆಂಜಿಂಗ್ ಸ್ಟಾರ್?! ನಿರ್ಮಾಪಕ ಮುನಿರತ್ನ ಘೋಷಣೆ

ಬೆಂಗಳೂರು, ಫೆಬ್ರವರಿ 24, 2020 (www.justkannada.in): ನಿರ್ಮಾಪಕ ಮುನಿರತ್ನ ದರ್ಶನ್ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದು, ಈ ಬಾರಿ ವಿಂಗ್ ಕಮಾಂಡರ್ ಅಭಿನಂದನ್ ಅವರ ಜೀವನಕಥೆಯಾಧಾರಿತ ಸಿನಿಮಾ ಮಾಡುವುದಾಗಿ ಘೋಷಿಸಿದ್ದಾರೆ.

ವಿಂಗ್ ಕಮಾಂಡರ್ ಅಭಿನಂದನ್ ಪಾತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಣ್ಣ ಹಚ್ಚಬೇಕೆಂಬುದು ನನ್ನಾಸೆ. ದರ್ಶನ್ ಅವರನ್ನು ವಿಂಗ್ ಕಮಾಂಡರ್ ಆಗಿ ತೆರೆಮೇಲೆ ತರಲಿದ್ದೇನೆ ಎಂದು ಮುನಿರತ್ನ ಘೋಷಿಸಿದ್ದಾರೆ. ಅಲ್ಲದೇ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಗೂ ಕೂಡ ಒಂದು ಪಾತ್ರ ಕೊಡುವುದಾಗಿ ಹೇಳಿದ್ದಾರೆ.

ಆದರೆ ದರ್ಶನ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಟ್ಟಾರೆ ವೀರಯೋಧ ವಿಂಗ್ ಕಮಾಂಡರ್ ಅಭಿನಂದನ್ ಪಾತ್ರದಲ್ಲಿ ತೆರೆಮೇಲೆ ಬರಲು ದರ್ಶನ್ ಸಜ್ಜಾಗುತ್ತಿದ್ದಾರೇ ಎಂಬುದನ್ನು ಕಾದುನೋಡಬೇಕು.

ಕುರುಕ್ಷೆತ್ರ ಚಿತ್ರ 100 ದಿನಗಳ ಪ್ರದರ್ಶನ ಕಂಡ ಹಿನ್ನಲೆಯಲ್ಲಿ ಶತದಿನೋತ್ಸವವನ್ನು ಸಂಭ್ರಮಿಸಲು ಆಯೋಜಿಸಿದ್ದ ಸಮಾರಂಭದಲ್ಲಿ ಮುನಿರತ್ನ ಈ ವಿಷಯ ಘೋಷಿಸಿದ್ದಾರೆ.