ಪ್ರೇಕ್ಷಕರಿಲ್ಲದೇ ಖಾಲಿ ಕೋರ್ಟ್ ನಲ್ಲಿ ಯುಎಸ್‌ ಓಪನ್‌ ಟೆನಿಸ್

ವಾಷಿಂಗ್ಟನ್ , ಜೂನ್ 17, 2020 (www.justkannada.in): ಈ ಬಾರಿ ಯುಎಸ್‌ ಓಪನ್‌ ಟೆನಿಸ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂಬ ಅಧಿಕೃತ ಮಾಹಿತಿಯೇ ಲಭ್ಯವಾಗಿದೆ.

ಆಗಸ್ಟ್‌ 31ಕ್ಕೆ ಯುಎಸ್ ಓಪನ್ ಟೆನಿಸ್‌ ಟೂರ್ನಿಗೆ ಮುಹೂರ್ತ ಫಿಕ್ಸ್‌ ಆಗಿತ್ತು. ಇದೀಗ ಇದೇ ವೇಳಾಪಟ್ಟಿ ಪ್ರಕಾರ ಟೆನಿಸ್ ಚಾಂಪಿಯನ್​ಶಿಪ್ ನಡೆಯಲಿದೆ ಅಂತಾ ನ್ಯೂಯಾರ್ಕ್‌ ಗವರ್ನರ್‌ ಆಯಂಡ್ಯೂ ಕ್ಯುಮೋ ಹೇಳಿದ್ದಾರೆ.

ಕೊರೊನಾ ಹಾವಳಿಯಿಂದ ಖಾಲಿ ಕೋರ್ಟ್​​ನಲ್ಲಿ ಪಂದ್ಯಗಳು ನಡೆಯಲಿದ್ದು, ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಹೀಗಾಗಿ ಈ ಬಾರಿ ಪ್ರೇಕ್ಷಕರಿಲ್ಲದೇ ಟೆನಿಸ್ ಓಪನ್ ಚಾಂಪಿಯನ್‌ಶಿಪ್‌ ನಡೆಯಲಿದೆ. USTA ಆಟಗಾರರ ಆರೋಗ್ಯದ ಬಗ್ಗೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಿದೆ.