ನಾಳೆ ಪಿಯು ಪರೀಕ್ಷೆ ಹಿನ್ನಲೆ: ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ…

ಮೈಸೂರು,ಜೂ,17,2020(www.justkannada.in): ನಾಳೆ ದ್ವಿತೀಯ ಪಿಯುಸಿ ಕೊನೆಯ ಇಂಗ್ಲೀಷ್ ವಿಷಯ ಪರೀಕ್ಷೆ ನಡೆಯಲಿದ್ದು ಈ ಹಿನ್ನಲೆ, ಮೈಸೂರಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

ಕೊರೊನಾ ಹರಡುತ್ತಿದ್ದರಿಂದ ಲಾಕ್ ಡೌನ್ ಮಾಡಿದ್ದ ಹಿನ್ನೆಲೆ ದ್ವಿತೀಯ ಪಿಯುಸಿ ಇಂಗ್ಲೀಷ್ ವಿಷಯ ಪರೀಕ್ಷೆ ಬಾಕಿ ಉಳಿದಿತ್ತು. ಈ ಪರೀಕ್ಷೆ ನಾಳೆ ನಡೆಯಲಿದ್ದು ವಿದ್ಯಾರ್ಥಿಗಳು ಬರೆಯಲಿದ್ದಾರೆ. ಇನ್ನು ಕೊರೋನಾ ಭೀತಿ ಹಿನ್ನೆಲೆ ಕೊರೊನಾ ಹರಡುವಿಕೆ ತಡೆಗಾಗಿ ಪಿಯು ಕಾಲೇಜುಗಳಲ್ಲಿ ಔಷಧಿ ಸಿಂಪಡಿಸಲಾಗುತ್ತಿದೆ.Tomorrow- PU Exam - spraying –exam centre-mysore

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪರೀಕ್ಷಾ ನಡೆಯುವ ಕಾಲೇಜು ಆವರಣ, ಕೊಠಡಿಗೆ ಪಾಲಿಕೆ ಸಿಬ್ಬಂದಿಗಳು ಔಷಧಿ ಸಿಂಪಡಿಸುತ್ತಿದ್ದಾರೆ. ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜು ನೇತೃತ್ವದಲ್ಲಿ ಕೊರೊನಾ ತಡೆ ಮುನ್ನೆಚ್ಚರಿಕೆಯಾಗಿ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ.

ಮೈಸೂರಿನ ಮರಿಮಲ್ಲಪ್ಪ, ಸದ್ವಿದ್ಯಾ, ಡಿ ಬನುಮಯ್ಯ, ಮಹಾರಾಜ ಸೇರಿದಂತೆ ಪಿಯು ಕಾಲೇಜುಗಳಲ್ಲಿ ಪಾಲಿಕೆ ಸಿಬ್ಬಂದಿಯಿಂದ ಔಷಧಿ ಸಿಂಪಡಣೆ ಜೊತೆಗೆ ಸ್ವಚ್ಚತಾ ಕಾರ್ಯ ನಡೆಯುತ್ತಿದೆ.

Key words: Tomorrow- PU Exam – spraying –exam centre-mysore