ಚಿರಂಜೀವಿ ಸರ್ಜಾ, ಸುಶಾಂತ್ ಸಿಂಗ್ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ

ಬೆಂಗಳೂರು, ಜೂನ್ 17, 2020 (www.justkannada.in):  ಚಿರಂಜೀವಿ ಸರ್ಜಾ , ಸುಶಾಂತ್ ಸಿಂಗ್  ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ.

ಗೂಗಲ್ ಇಂಡಿಯಾ ಟ್ವೀಟ್ ಮೂಲಕ ಚಿಕ್ಕ ವಯಸ್ಸಿನಲ್ಲಿಯೇ ಬದುಕು ಮುಗಿಸಿದ ಕಲಾವಿದರಿಗೆ ನಮನ ಸಲ್ಲಿಸಿದೆ.

ಕಷ್ಟಕರವಾದ ಸಮಯ. ನಾವು ದೂರ ಉಳಿದಿದ್ದೇವೆ. ಒಬ್ಬರಿಗೊಬ್ಬರು ಸಂಪರ್ಕದಲ್ಲಿ ಇರುವುದು ಹಿಂದೆಂದಿಗಿಂತಲೂ ಬಹಳ ಮುಖ್ಯವಾಗಿದೆ. ಯಾರಾದರೂ ಈ ರೀತಿ ಕಷ್ಟದಲ್ಲಿ ಇರುವುದು ನಿಮ್ಮ ಗಮನಕ್ಕೆ ಬಂದರೆ ದಯವಿಟ್ಟು ಈ ನಂಬರ್​​ಗೆ ಕರೆ ಮಾಡಿ ಅಂತಾ ನಂಬರ್​​ಯೊಂದನ್ನು ಹಾಕಿ ಗೂಗಲ್​ ಟ್ವೀಟ್​ ಮಾಡಿದೆ.

ಈ ಮೂಲಕ  ಪ್ರತಿಭಾವಂತ ನಟರ ಅಗಲಿಕೆಗೆ ಗೂಗಲ್ ಇಂಡಿಯಾ ಸಂತಾಪ ಸೂಚಿಸಿದೆ.