ಕೊರೊನಾ ಕಾಟ: ಈ ವರ್ಷ ಯುಎಸ್ ಓಪೆನ್ ನಡೆಯುವುದು ಡೌಟ್!

ಬೆಂಗಳೂರು, ಜೂನ್ 16, 2020 (www.justkannada.in): ಬ್ರಿಸ್ಬೇನ್, ಜೂ.15: ಈ ವರ್ಷ ಯು ಎಸ್ ಓಪನ್ ನಡೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕೋವಿಡ್ -19 ಕಾರಣದಿಂದಾಗಿ ಪ್ರತಿಷ್ಠಿತ ಟೂರ್ನಿ ನಡೆಯುವ ಸಾಧ್ಯತೆ ಕಡಿಮೆ ಎಂದು ವಿಶ್ವದ ನಂ.1 ಟೆನಿಸ್ ಆಟಗಾರ್ತಿ ಆಶ್ಲೀ ಬಾರ್ಟಿ ಹೇಳಿದ್ದಾರೆ.

ಟೆನಿಸ್ ಆಟ ಸ್ಥಗಿತಗೊಂಡ ಕಾರಣದಿಂದಾಗಿ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಬಾರ್ಟಿಗೆ ಈ ವರ್ಷ ಅವಕಾಶ ಇಲ್ಲ. ಎಲ್ಲಾ ಪ್ರಮುಖ ಟೆನಿಸ್ ಸ್ಪರ್ಧೆಗಳು ಸ್ಥಗಿತಗೊಂಡಿವೆ.

2020ರಲ್ಲಿ ಯಾವುದೇ ವಿಂಬಲ್ಡನ್ ಇರುವುದಿಲ್ಲ ಎಂಬ ಅಂಶವನ್ನು ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆದರೆ ಆಗಸ್ಟ್ 31 ರಿಂದ ಪ್ರಾರಂಭವಾಗಲಿರುವ ಯುಎಸ್ ಓಪನ್ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿದ್ದಾರೆ.