‘ಖೇಲ್ ರತ್ನ’ಕ್ಕೆ ಹಿಮಾ ದಾಸ್ ನಾಮ ನಿರ್ದೇಶನ ಮಾಡಿದ ಅಸ್ಸಾಂ ಸರ್ಕಾರ !

ಬೆಂಗಳೂರು, ಜೂನ್ 16, 2020 (www.justkannada.in): ‘ಖೇಲ್ ರತ್ನ’ಕ್ಕೆ ಹಿಮಾ ದಾಸ್ ನಾಮ ನಿರ್ದೇಶನ ಮಾಡಿದ ಅಸ್ಸಾಂ ಸರ್ಕಾರ.

ಭರವಸೆಯ ಓಟಗಾರ್ತಿ ಹಿಮಾ ಹೆಸರನ್ನು ಅಸ್ಸಾಂ ಸರ್ಕಾರ ‘ಖೇಲ್ ರತ್ನ’ಕ್ಕೆ ನಾಮ ನಿರ್ದೇಶಿಸಿದೆ. ಭಾರತದ ಸ್ಪ್ರಿಂಟರ್ ಹಿಮಾ ದಾಸ್ ಹೆಸರು ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ಶಿಫಾರಸಾಗಿದೆ.

ಅಸ್ಸಾಂನ ಧಿಂಗ ಗ್ರಾಮದಲ್ಲಿರುವ 20ರ ಹರೆಯದ ಹಿಮಾ ದಾಸ್, ಖೇಲ್ ರತ್ನಕ್ಕೆ ಶಿಫಾರಸಾದ ಅತೀ ಕಿರಿಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ.

ಅಸ್ಸಾ ಕ್ರೀಡಾ ಕಾರ್ಯದರ್ಶಿ ದುಲಾಲ್ ಚಂದ್ರ ದಾಸ್ ಅವರು ಜೂನ್ 5ರಂದು ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಪತ್ರ ರವಾನಿಸಿದ್ದಾರೆ.