Sunday, August 23, 2026

BDA Apartments

Home Front Page ಸಿದ‍್ಧರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ.

ಸಿದ‍್ಧರಾಮಯ್ಯ, ಪರಮೇಶ್ವರ್ ಕುಮ್ಮಕ್ಕಿನಿಂದಲೇ ಶಿವಮೊಗ್ಗದಲ್ಲಿ ಗಲಾಟೆ-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪ.

ಚಾಮರಾಜನಗರ, ಅಕ್ಟೋಬರ್,3,2023(www.justkannada.in): ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಕುಮ್ಮಕ್ಕಿನಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈದ್​ ಮಿಲಾದ್ ಹಬ್ಬದ ದಿನ ಬಿಟ್ಟು ಬೇರೆ ದಿನ ಆಚರಿಸಲು ಕಾರಣವೇನು? ಈದ್ ಮಿಲಾದ್​ ಅಂದರೆ ಒಂದು ದಿನ ಆಚರಿಸುವ ಹಬ್ಬ ಅಲ್ವಾ?  ದಂಗೆ ಎಬ್ಬಿಸಲೆಂದೇ ಒಂದು ದಿನ ಬಿಟ್ಟು ಆಚರಿಸಲಾಗಿದೆ. ಶಿವಮೊಗ್ಗ, ಕೋಲಾರದಲ್ಲಿ ತಲ್ವಾರ್ ಹಿಡಿದು ಮೆರವಣಿಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಅತಿ ದೊಡ್ಡ ಖಡ್ಗದ ಮೆರವಣಿಗೆ ಮಾಡಲಾಗಿದೆ, ಇದರ ಅರ್ಥವೇನು? ಔರಂಗಜೇಬನ ದೊಡ್ಡ ಫೋಟೋ ಹಾಕಿ ಅಖಂಡ ಭಾರತವನ್ನ ಆಳಿದ ಮಹಾರಾಜ ಎಂಬ ಬರಹಗಳನ್ನ ಬರೆದಿದ್ದಾರೆ. ನಿಮ್ಮ ಆದರ್ಶಪುರುಷ ಮೊಹಮ್ಮದ್ ಪೈಂಗಬರ್ ಹಾಗೂ ಅಬ್ಧುಲ್ ಕಲಾಮ್ ಆಗಿರಬೇಕು ಎಂದು ಹೇಳಿದರು.

Key words: Union Minister- Shobha Karandlaje-accused -rioting – Shimoga-Siddhalaramaiah-Parameshwar